ವಿಜಯಪುರ, 05 ಜುಲೈ (ಹಿ.ಸ.) :
ಆ್ಯಂಕರ್ : ಗಣಿತ ಲೆಕ್ಕ ಮಾಡದಿಕ್ಕೆ ವಿದ್ಯಾರ್ಥಿನಿಗೆ ಹಿಗ್ಗಾಮುಗ್ಗಾ ಶಿಕ್ಷಕಿ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ನಿವಳಖೇಡ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ಸುಕ್ರಿತಾಗೆ ಬಾಸುಂದೆ ಬರುವ ಹಾಗೆ ಶಿಕ್ಷಕಿ ಭಾಗ್ಯ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಡಿಗೆಯಿಂದ ಸುಕ್ರಿತಾಳ ಎರಡು ಕೈಗೆ ಶಿಕ್ಷಕಿಯಿಂದ ಥಳಿಸಿದ್ದಾರೆ.
ಸುಕ್ರಿತಾ ತಂದೆ ಕಾಸು ಮೆಟಗಾರಿಂದ ಥಳಿತವನ್ನು ಖಂಡಿಸಿ, ಶಾಲೆಗೆ ಬಂದು ಥಳಿಸಿದ ಶಿಕ್ಷಕಿ ಭಾಗ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದೆ ರೀತಿ ಥಳಿಸಿದ್ದಕ್ಕೆ ಶಾಲೆಯನ್ನು ಖುಷಿ ಎಂಬ ವಿದ್ಯಾರ್ಥಿನಿ ಬಿಟ್ಟಿದ್ದಾಳೆ. ಅದಕ್ಕಿಂತ ಥಳಿಸಿದ ಶಿಕ್ಷಕಿ ಭಾಗ್ಯ ವಿರುದ್ದ ಕಠಿಣ ಕ್ರಮ ಜರುಗಿಸಲು ಬಿಇಓಗೆ ಸುಕ್ರಿತಾ ತಂದೆ ಕಾಸು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande
