ಬಳ್ಳಾರಿ, 12 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕರ್ನಾಟಕ ಪ್ರಕಾಶಕರ ಸಂಘ ಅವರ ಸಹಯೋಗದಲ್ಲಿ ಪುಸ್ತಕ ಪ್ರಕಾಶನ ಕುರಿತು ಎರಡು ದಿನಗಳ ಕಮ್ಮಟ ಡಿಸೆಂಬರ್ 17 ಮತ್ತು 18 ರಂದು ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎನ್.ಎಂ. ಸಾಲಿ ಅವರು ಈ ಮಾಹಿತಿ ನೀಡಿದ್ದು, ಕರ್ನಾಟಕ ಪ್ರಕಾಶನರಂಗದ ಸ್ಥೂಲ ನೋಟ, ಪುಸ್ತಕ ನಿರ್ಮಾಣದ ಹಂತಗಳ ಬಗೆ, ಪುಸ್ತಕ ಪ್ರಕಾಶನ ಮತ್ತು ಕಾನೂನುಗಳು, ಕರಡು ತಿದ್ದುವಿಕೆಯ ಆಯಾಮಗಳು, ಪುಸ್ತಕ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ, ಮುದ್ರಣ ಶಾಲೆಯ ವಿವಿಧ ಹಂತಗಳು, ಪುಸ್ತಕ ಸಂಸ್ಕೃತಿಯ ಪ್ರಸಾರ ಮತ್ತು ಪ್ರಸಾರಾಂಗಗಳು, ಪತ್ರಿಕಾ ವಿಮರ್ಶೆ ಮತ್ತು ಪ್ರಸಾರ, ಪುಸ್ತಕ ಪ್ರಕಾಶನ ಮತ್ತು ಮಾರಾಟ ಮೊದಲಾದ ವಿಷಯಗಳ ರಾಜ್ಯದ ಸಂಪನ್ಮೂಲ ವ್ಯಕ್ತಿಗಳಿಂದ ಗೋಷ್ಠಿಗಳು ನಡೆಯಲಿವೆ ಎಂದರು.
ಎರಡು ದಿನಗಳ ಕಾಲ ನಡೆಯುವ ಈ ಶಿಬಿರವು ಉಚಿತವಾಗಿದೆ. ವಿದ್ಯಾರ್ಥಿಗಳು, ಅಧ್ಯಾಪಕರಿಗೆ, ಹೊಸ ಪ್ರಕಾಶಕರಿಗೆ ಶಿಬಿರವು ಅನುಕೂಲವಾಗಲಿದೆ. ಕಮ್ಮಟದಲ್ಲಿ ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರಸಾರಾಂಗದ ನಿರ್ದೇಶಕರಾದ ಡಾ. ತಿಪ್ಪೇರುದ್ರ (9448855457) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
