• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ರಾಯಚೂರು : ಅಶುಚಿತ್ವ ದೂರು, ಅಧಿಕಾರಿಗಳಿಂದ ದಿಢೀರ್ ದಾಳಿ; ದಂಡ – ಎಚ್ಚರಿಕೆ
Regional

ರಾಯಚೂರು : ಅಶುಚಿತ್ವ ದೂರು, ಅಧಿಕಾರಿಗಳಿಂದ ದಿಢೀರ್ ದಾಳಿ; ದಂಡ – ಎಚ್ಚರಿಕೆ

CliQ INDIA
Last updated: September 22, 2025 2:40 am
CliQ INDIA
Share
3 Min Read
SHARE
ರಾಯಚೂರು : ಅಶುಚಿತ್ವ ದೂರು: ಅಧಿಕಾರಿಗಳಿಂದ ದೀಢೀರ್ ದಾಳಿ; ದಂಡ - ಎಚ್ಚರಿಕೆ
ರಾಯಚೂರು : ಅಶುಚಿತ್ವ ದೂರು: ಅಧಿಕಾರಿಗಳಿಂದ ದೀಢೀರ್ ದಾಳಿ; ದಂಡ - ಎಚ್ಚರಿಕೆ
ರಾಯಚೂರು : ಅಶುಚಿತ್ವ ದೂರು: ಅಧಿಕಾರಿಗಳಿಂದ ದೀಢೀರ್ ದಾಳಿ; ದಂಡ - ಎಚ್ಚರಿಕೆ

ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ ಹಾಗೂ ರಾಯಚೂರು ಮಹಾನಗರ ಪಾಲಿಕೆಯಿಂದ ದಿಢೀರ್ ದಾಳಿ ನಡೆಸಿ ಹೊಟೆಲ್‌ಗಳು, ಚಹಾ ಅಂಗಡಿಗಳು, ರೆಸ್ಟೊರೆಂಟಗಳು ಮತ್ತು ಬಾರಗಳಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.

ರಾಯಚೂರು ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ನೇತೃತ್ವದಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಒಂದು ತಂಡವು ರೈಲ್ವೆ ನಿಲಾಣದ ಸುತ್ತಲಿನ 10ಕ್ಕೂ ಹೆಚ್ಚು ಹೊಟೆಲ್‌ಗಳು, ಚಹಾ ಅಂಗಡಿಗಳು ಮತ್ತು ರೆಸ್ಟೊರೆಂಟಗಳ ಮೇಲೆ ದಾಳಿ ನಡೆಸಿ 30 ಸಾವಿರ ರೂ.ವರೆಗೆ ದಂಡಿ ವಿದಿಸಿತು.

ಪಾಲಿಕೆಯ ಕಂದಾಯ ವಲಯ ಆಯುಕ್ತರು ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನೇತೃತ್ವದ ಮತ್ತೊಂದು ತಂಡವು ಸಹ ಸುಮಾರು 10 ಕ್ಕೂ ಹೆಚ್ಚು ಬಾರ್ ಹಾಗೂ ರೆಸ್ಟೋರೆಂಟೆಗಳು ಮತ್ತು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿನ ಸಾಮಗ್ರಿಗಳು, ಶುಚಿತ್ವದ ಬಗ್ಗೆ ಪರಿಶೀಲಿಸಿ 50 ಸಾವಿರ ರೂ.ಗಳರೆಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ನೇತೃತ್ವದ ತಂಡವು ರೈಲ್ವೆ ನಿಲ್ದಾಣದ ಸುತ್ತಲಿನ ಸಸ್ಯಹಾರಿ ಮತ್ತು ಮೌಂಸಾಹಾರಿ ಹೊಟೆಲ್‌ಗಳಿಗೆ ಪ್ರವೇಶಿಸಿ ಅವರು ಅಡುಗೆಗೆ ಬಳಸುವ ನಾನಾ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿತು.

ಕೆಲ ಹೊಟೆಲಗಳಲ್ಲಿ ನಿಷೇಧಿತ ಉಪ್ಪನ್ನು ಮತ್ತು ನಿಷೇಧಿತ ಬಣ್ಣದ ರಸಾಯನವನ್ನು ಬಳಸುವುದರ ಬಗ್ಗೆ ಪತ್ತೆ ಹಚ್ಚಿ ದಂಡ ವಿಧಿಸಿದರು.

ಇನ್ಮುಂದೆ ಬಳಸಕೂಡದು ಎಂದು ಎಚ್ಚರಿಕೆ ನೀಡಲಾಯಿತು. ಕೆಲ ಹೊಟೆಲಗಳಲ್ಲಿ ಅಶುಚಿತ್ವ ಕಂಡು ಬಂದಿತು.

ನೊಟೀಸ್ ಜಾರಿ: ಕೆಲಸ ಮಾಡುವವರು ವ್ಶೆದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರುವುದಿಲ್ಲ. ಹೊಟೆಲ್‌ನ ಆವರಣದ ಹೊರಗೆ ಮತ್ತು ಒಳಗೆ ಸ್ವಚ್ಛತೆ ಕಾಪಾಡಲು ವಿಫಲರಾಗಿದ್ದಾರೆ ಮತ್ತು ದುರ್ನಾತ ಬರುತ್ತಿದೆ. ಅಡುಗೆಗೆ ಬಣ್ಣವನ್ನು ಕಾನೂನಿನ ಪ್ರಕಾರ 100 ಪಿಪಿಎಂಗಿ0ತ ಅಧಿಕ ಬಳಸುತ್ತಿದ್ದಾರೆ ಎಂದು ಕೆಲ ಹೊಟೆಲಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದಿಂದ ಸುಧಾರಣಾ ನೊಟೀಸ್ ಜಾರಿ ಮಾಡಲಾಯಿತು.

ಪ್ರಯೋಗಾಲಕ್ಕೆ ಕಳುಹಿಸಲು ನೀರು ಸಂಗ್ರಹ: ಭೇಟಿ ಸಂದರ್ಭದಲ್ಲಿ ಕೆಲ ಹೊಟೆಲಗಳಲ್ಲಿನ ನೀರಿನ ತೊಟ್ಟಿಗಳು ಮತ್ತು ಟ್ಯಾಂಕಗಳನ್ನು ಪರಿಶೀಲಿಸಲಾಯಿತು.

ನೀರಿನ ತೊಟ್ಟಿಯು ಜಂಗು ಹತ್ತಿದಂತೆ ಮತ್ತು ಅಶುಚಿತ್ವ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಲು ಬಾಟಲಗಳಲ್ಲಿ ನೀರು ಸಂಗ್ರಹಿಸಲಾಯಿತು. ಪ್ರತಿ ದಿನ ನೀರಿನ ತೊಟ್ಟಿ, ಟ್ಯಾಂಕಗಳನ್ನು ಸ್ವಚ್ಛ ಮಾಡುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.

ಪ್ಲಾಸ್ಟಿಕ್ ಬಳಕೆಗೆ ದಂಡ: ಪಾಲಿಕೆಯ ಕಂದಾಯ ವಲಯ ಆಯುಕ್ತರು ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನೇತೃತ್ವದ ತಂಡವು ಬಾರ್‌ಗಳಲ್ಲಿ ಸ್ವಚ್ಛತೆ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪರಿಶೀಲಿಸಿತು. ಕೆಲ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್, ನೀರಿನ ಪೌಚ್‌ಗಳ ಬಳಸುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ರಸಾಯನಿಕ ಬಳಸದಂತೆ ಎಚ್ಚರಿಕೆ: ಹೋಟೆಲ್ ಮತ್ತು ರೆಸ್ಟೋರೆಂಟಗಳ ಪ್ರವೇಶ ವೇಳೆಯಲ್ಲಿ ಅಲ್ಲಿ ಬಳಸುತ್ತಿದ್ದ ಅಡುಗೆ ಸಾಮಗ್ರಿ, ದವಸ ದಾನ್ಯಗಳ ಗುಣಮಟ್ಟ, ಅಡುಗೆಗೆ ಬಳಸುವ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು. ಸಾರ್ವಜನಿಕರಿಗೆ ನೀಡುವ ಯಾವುದೇ ಪದಾರ್ಥಗಳಿಗೆ ರಾಸಾಯನಿಕ ಬಳಸಬಾರದು. ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ವಿಶೇಷ ನಿಗಾವಹಿಸಬೇಕು. ಹೋಟೆಲ್ ಮತ್ತು ರೆಸ್ಟೋರೆಂಟಗಳಲ್ಲಿನ ಸಿಬ್ಬಂದಿಯು ವೈಯಕ್ತಿಕವಾಗಿ ಸ್ವಚ್ಛತೆಯಿಂದಿರಬೇಕು. ಆರೋಗ್ಯವಂತರಾಗಿರಬೇಕು. ಅಡುಗೆ ಮಾಡುವ ಎಲ್ಲ ಸಿಬ್ಬಂದಿಯ ಆರೋಗ್ಯ ಬಗ್ಗೆ ಕಾಲಕಾಲಕ್ಕೆ ಕಡ್ಡಾಯ ತಪಾಸಣೆ ಮಾಡಿಸಬೇಕೆಂದು ಮಾಲೀಕರಿಗೆ ಇದೆ ವೇಳೆ ಎಚ್ಚರಿಕೆ ನೀಡಲಾಯಿತು.

ಸ್ವಚ್ಛತಾ ನಿಯಮಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಿ ಉಲ್ಲಂಘನೆ ಮಾಡಿದರೆ ಅಂತಹ ಹೋಟೆಲ್ ಹಾಗೂ ಅಂಗಡಿಗಳ ಮೇಲೆ ದಂಡ ವಿಧಿಸಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗುವುದು, ಅಗತ್ಯವಿದ್ದಲ್ಲಿ ಅಂಗಡಿಯನ್ನು ಮುಟ್ಟುಗೋಲ ಅಥವಾ ವಶಪಡಿಸಕೊಳ್ಳಲಾಗುವುದು ಎಚ್ಚರಿಕೆ ನೀಡಲಾಯಿತು.

ನಾನಾ ಅಂಶಗಳ ಪರಿಶೀಲನೆ: ಆಹಾರ ಪರವಾನಿಗೆ, ನೋಂದಣಿ ನವೀಕರಣ, ಪಡೆದಿರುವ ಆಹಾರದ ಪರವಾನಿಗೆ ನೋಂದಣಿ ಪತ್ರದ ಪ್ರದರ್ಶನ ಇದೆಯೇ?, ಶುದ್ಧ ಕುಡಿಯುವ ನೀರು ನೀಡಲು ಉಪಕರಣ ಅಳವಡಿಸಿರುವುದಿಲ್ಲ. ತಿಂಡಿ ತಿನಿಸು, ಪಾನೀಯಗಳು ತೆರೆದ ಪಾತ್ರೆಯಲ್ಲಿವೆಯೇ? ತಟ್ಟೆ, ಚಮಚೆ, ಲೋಟ ಇತ್ಯಾದಿಯನ್ನು ಕುದಿಯುವ ನೀರಿನಿಂದ ಸ್ವಚ್ಚಗೊಳಿಸಿಲ್ಲ. ಆಹಾರ ತಯಾರು ಮಾಡುವ ಕೊಠಡಿ ಸಂಗ್ರಹ ಮತ್ತು ಮಾರಾಟ ಮಾಡುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿಲ್ಲ. ನೆಲ ಮೇಜುಗಳನ್ನು ನೊಣ ಹಾಗೂ ಇತರೆ ಕ್ರಿಮಿಕೀಟಗಳಿಂದ ಮುಕ್ತವಾಗಿರಿಸಲು ಕ್ರಮಿನಿನಾಶಕಗಳಿಂದ ಸ್ವಚ್ಛಗೊಳಿಸಿಲ್ಲ. ಒಡೆದ ಮೊಟ್ಟೆ, ಕಳಪೆ ಮೊಟ್ಟೆ ಬಳಸುತ್ತಿರುವುದು, ಹೊಟೆಲ್‌ನಲ್ಲಿ ಅಡುಗೆ ಮಾಡುವ, ಸರಬರಾಜು ಸಿಬ್ಬಂದಿ ತಲೆಗೆ ಟೋಪಿ, ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ ಹಾಕಿದ್ದಾರಾ? ಐಎಸ್‌ಐ ಪ್ರಾಮಾಣಿಕರೀಸಿದ ಬಣ್ಣಗಳನ್ನು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸುತ್ತಿಲ್ಲ. ಪಾತ್ರೆ ಪರಿಕರ ತೊಳೆಯುವ ಜಾಗದಲ್ಲಿ ನೀರು ನಿಲ್ಲದಂತೆ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಡುಗೆ ಕೋಣೆಯಲ್ಲಿ ಸೂಚಿತ ಫ್ಯಾನ್ ಅಳವಡಿಸಿಲ್ಲ. ಕೀಟನಾಶಕ ಪ್ರಮಾಣ ಪತ್ರ ಇಟ್ಟಿರುವುದಿಲ್ಲ ಎನ್ನುವಂತಹ ನಾನಾ ಅಂಶಗಳ ಬಗ್ಗೆ ಭೇಟಿ ವೇಳೆ ಪರಿಶೀಲಿಸಲಾಯಿತು. ಲೋಪ ಕಂಡು ಬಂದ ಕಡೆಗಳಲ್ಲಿ ದಂಡ ವಿಧಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ಕೊಪ್ಪಳ : ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ
ಅಪೂರ್ಣ ಕಾಮಗಾರಿಗಳನ್ನು ತ್ವರಿತಗತಿಯಲ್ಲಿಯೇ ಪೂರ್ಣಗೊಳಿಸಿ : ಸಚಿವ ಎಚ್. ಕೆ. ಪಾಟೀಲ್
ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮಾಹಿತಿ ಅಭಿಯಾನ
ಬಳ್ಳಾರಿ : ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ
ಬೆಂಗಳೂರಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ಮಲ್ಲೆಶ್ವರಂ ಟಿಟಿಡಿಯಲ್ಲಿ ಹಬ್ಬದ ವಾತಾವರಣ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಅಸ್ಸಾಂನಲ್ಲಿ ಜುಬೀನ್ ಗರ್ಗ್ ಅಂತಿಮ ಯಾತ್ರೆ
Next Article ಶಾಂತಿ ಆತ್ಮದಿಂದ ಬರುತ್ತದೆ:ವಿಶ್ವ ಶಾಂತಿ ದಿನದಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿಕೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?