ಹುಬ್ಬಳ್ಳಿ, 29 ನವೆಂಬರ್ (ಹಿ.ಸ):
ಆ್ಯಂಕರ್ :
ಬಿಜೆಪಿಯಲ್ಲಿ ದಿನೇ ದಿನೆ ಅಸಮಾಧಾನ ಭುಗಿಲೇಳುತ್ತಲೇ ಇದೆ. ಅಲ್ಲಿ ಯಾವುದೇ ಶಿಸ್ತು ಉಳಿದಿಲ್ಲ. ಈಗ ಆ ಪಕ್ಷ ರಿಪೇರಿ ಮಾಡದಷ್ಟು ಹದಗೆಟ್ಟು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನಾಯಕರು ದೆಹಲಿ ತನಕ ದೂರು ನೀಡಲು ಸಜ್ಜಾಗಿದ್ದಾರೆ ಅಂದರೆ ಏನರ್ಥ? ರಾಜ್ಯ ಬಿಜೆಪಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವಾಗ ಇಷ್ಟೊಂದು ಅಪಸ್ವರ ಬರಬಾರದು ಎಂದರು.
ಡಿ.ಕೆ.ಶಿವಕುಮಾರ್ ಮೇಲಿನ ಪ್ರಕರಣ ಹಿಂಪಡೆಯುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟವರು. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲಿನ ಪ್ರಕರಣ ವಾಪಸ್ ಪಡೆದರೆ ತಪ್ಪೇನು? ಇದನ್ನು ನಾನು ಸ್ವಾಗತಿಸುವೆ ಎಂದರು. ಮಾಜಿ ಶಾಸಕ ಚಿಕ್ಕನಗೌಡರ ವಿಜೇಯಂದ್ರ ಭೇಟಿ ವಿಚಾರಕ್ಕೆ ಉತ್ತರಿಸಿದ ಶೆಟ್ಟರ್, ಯಾವಾಗ ಏನಾಗುತ್ತದೆ ಹೇಳಲು ಆಗಲ್ಲ. ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆ ಕುರಿತು ನಾನೇ ಮಾತಾಡಿದ್ದೇನೆ. ಸ್ಥಳೀಯವಾಗಿ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದರು
ಹಿಂದೂಸ್ತಾನ್ ಸಮಾಚಾರ್
