ರಾಯಚೂರು, 17 ಜನವರಿ(ಹಿ.ಸ):
ಆ್ಯಂಕರ್: ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ರಾಯಚೂರು ಜಿಲ್ಲೆಯ ಸಿರವಾರ ಮತ್ತು ಮಸ್ಕಿ ತಾಲೂಕುಗಳನ್ನು ಬಲಪಡಿಸಲು ಮತ್ತು ಕಾರ್ಯಕ್ರಮವನ್ನು ಅನುμÁ್ಠನಗೊಳಿಸಲು ಗುತ್ತಿಗೆ ಆಧಾರದ ಮೇಲೆ “ಆಸ್ಪಿರೇಷನಲ್ ಬ್ಲಾಕ್ ಫೆಲೋಗಳ” (Aspirational Block Fellows) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆಸ್ಪಿರೇಷನಲ್ ಬ್ಲಾಕ್ ಫೆಲೋಗಳು ಆಸ್ಪಿರೇಷನಲ್ ಬ್ಲಾಕ್ ಫೆಲೋಗಳನ್ನು 12 ತಿಂಗಳುಗಳಕಾಲ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುತ್ತದೆ. ಸದರಿ ಆಸ್ಪಿರೇಷನಲ್ ಬ್ಲಾಕ್ ಫೆಲೋಗಳು ಸಂಬಂಧಪಟ್ಟ ತಾಲೂಕುಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಗ್ರಾಮ/ಹಳ್ಳಿಗಳಿಗೆ ಭೇಟಿನೀಡಿ ಜನರ ಅಗತ್ಯತೆಗಳು ಮತ್ತು ಬೇಡಿಕೆಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ರವರ ಮಾರ್ಗದರ್ಶನದಲ್ಲಿ ಎಬಿಪಿ (ABP) ವಿಷಯಾಧಾರಿತ ಪ್ರದೇಶಗಳಲ್ಲಿ ಕಾರ್ಯಕ್ರಮಗಳ ತ್ವರಿತ ಅನುμÁ್ಠನಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುವುದು, ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಯೋಜನೆಗಳನ್ನು ಸುಗಮಗೊಳಿಸುವನಿಟ್ಟಿನಲ್ಲಿ ಮಧ್ಯಸ್ಥಿಕೆಯನ್ನು ವಹಿಸಿಲಿದ್ದಾರೆ.
ಮಹತ್ವಾಕಾಂಕ್ಷಿ ತಾಲೂಕುಗಳಾದ ಸಿರವಾರ ಮತ್ತು ಮಸ್ಕಿ ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಒಬ್ಬ ಪರಿಣಿತರನ್ನು ನೇಮಿಸಿಕೊಳ್ಳಲಾಗುವುದು, ನೀತಿ ಆಯೋಗ ನಿಗದಿಪಡಿಸಿದಂತೆ ಆಯ್ಕೆಯಾದ ಪ್ರತಿಯೊಬ್ಬ ಆಸ್ಪಿರೇಷನಲ್ ಬ್ಲಾಕ್ ಫೆಲೋಗೆ ರೂ.55,000/-ಗಳನ್ನು ಮಾಸಿಕ ಸಂಭಾವನೆಯಾಗಿ ನೀಡಲಾಗುತ್ತದೆ.
ಕನಿಷ್ಠ ವಿದ್ಯಾರ್ಹತೆ ಮತ್ತು ಅನುಭವ: ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಡೇಟಾ ವಿಶ್ಲೇಷಣೆ ಮತ್ತು ಅವುಗಳನ್ನು ಪ್ರಸ್ತುತಪಡಿಸುವ ಕೌಶಲ್ಯಗಳನ್ನು ಹೊಂದಿರಬೇಕು. ಕಂಪ್ಯೂಟರ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ತಿಳಿದಿರಬೇಕು. ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸ್ಕಿಲ್ಗಳನ್ನು ಹೊಂದಿರಬೇಕು. ಸಾಮಾಜಿಕ ಅಭಿವೃದ್ಧಿ ಸಂಸ್ಥೆಗಳಲ್ಲಿ ಕೆಲಸ/ಇಂಟನ್ರ್ಶಿಪ್ ಮಾಡಿದ ಅನುಭವ ಹೊಂದಿರಬೇಕು. ಇಂಗ್ಲಿμï ಮತ್ತು ಕನ್ನಡ ಭಾμÉಗಳಲ್ಲಿ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಉನ್ನತ ಶಿಕ್ಷಣ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಆಸ್ಪಿರೇಷನಲ್ ಬ್ಲಾಕ್ ಫೆಲೋಗಳ ಪಾತ್ರ: ಆಸ್ಪಿರೇಷನಲ್ ಬ್ಲಾಕ್ ಫೆಲೋಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ನೀತಿ ಆಯೋಗದ ನಡುವಿನ ಕೊಂಡಿಯಾಗಿ ಇರಿಸಲಾಗುತ್ತದೆ. ಗ್ರಾಮ/ಹಳ್ಳಿಗಳ ಅಭಿವೃದ್ಧಿ ಕಾರ್ಯತಂತ್ರಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಹಕರಿಸುವುದು. ಯೋಜನೆಗಳನ್ನು ಅನುμÁ್ಠನಗೊಳಿಸುವ ನಿಟ್ಟಿನಲ್ಲಿ ಕಂಡುಬರುವ ಸಮಸ್ಯೆಗಳು/ಸವಾಲುಗಳನ್ನು ಪರಿಹರಿಸಲು ಗ್ರಾಮ/ಹಳ್ಳಿ/ನಿಯಮಿತ ಕ್ಷೇತ್ರ ಭೇಟಿಗಳನ್ನು ನಡೆಸುವುದು. ಡೇಟಾವನ್ನು ವಿಶ್ಲೇಷಿಸುವುದು ಮತ್ತು ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಾಕ್ಷ್ಯಧಾರಿತ ಅಭಿವೃದ್ಧಿಯ ಉಪಕ್ರಮಗಳ ಶಿಫಾರಸ್ಸುಗಳನ್ನು ಒದಗಿಸುವುದು. ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸಲು ಕಾರ್ಯಾಗಾರಗಳು, ಜಾಗೃತಿ ಅಭಿಯಾನಗಳು ಮತ್ತು ಕೌಶಲ್ಯ-ನಿರ್ಮಾಣ ಕಾರ್ಯಕ್ರಮಗಳನ್ನು ಆಯೋಜಿಸುವುದು. ಇವರ ಪ್ರಾಥಮಿಕ ಜವಾಬ್ದಾರಿಗಳಾಗಿರುತ್ತವೆ.
ಅರ್ಜಿಯ ಪ್ರಕ್ರಿಯೆ: ಅರ್ಹ ವಿದ್ಯಾರ್ಹತೆ ಮತ್ತು ಅನುಭವ ಹೊಂದಿದ ಆಸಕ್ತರ ಅಭ್ಯರ್ಥಿಗಳು ಸ್ವಯಂ-ಧೃಢೀಕರಿಸಿದ ದಾಖಲೆಗಳ ಪ್ರತಿಗಳು, ಅನುಭವ ಪ್ರಮಾಣಪತ್ರಗಳು ಮತ್ತು ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗಿನ ಬಯೋಡಾಟಾಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರು ವಿಳಾಸಕ್ಕೆ ರಿಜಿಸ್ಟರ್ ಪೆÇೀಸ್ಟ್ ಮೂಲಕ ದಿನಾಂಕ:24-01-2024ರೊಳಗಾಗಿ ಕಳುಹಿಸತಕ್ಕದ್ದು. ನಿಗದಿತ ದಿನಾಂಕದ ನಂತರದ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಸಂದರ್ಶನದ ಸಮಯದಲ್ಲಿ ಪರಿಶೀಲನೆಗಾಗಿ ಮೂಲ ದಾಖಲೆಗಳನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ:08532-229011 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
