ಎಚ್.ಡಿ. ಕೋಟೆ, 24 ಡಿಸೆಂಬರ್(ಹಿ.ಸ):
ಆ್ಯಂಕರ್ : ಎಚ್.ಡಿ. ಕೋಟೆ, ಸರಗೂರು ತಾಲೂಕುಗಳಲ್ಲಿ ಬಗರ್ ಹುಕುಂ ಭೂಮಿಯನ್ನು ರೈತರು ಸುಮಾರು ತಲೆಮಾರುಗಳಿಂದ ಉಳುಮೆ ಮಾಡುತ್ತಾ ಬಂದಿದ್ದು, ಹಂತ ಹಂತವಾಗಿ ನಮೂನೆ 50/60 ಹಾಗೂ 57ರಲ್ಲಿ ಬಗರ್ ಹುಕುಂ ಸಾಗುವಳಿಗೆ ಅರ್ಜಿಯನ್ನು ನಿರಂತರವಾಗಿ ಸಲ್ಲಿಸುತ್ತಲೇ ಬರುತ್ತಿದ್ದರೂ ಕೂಡ ಇನ್ನೂ ಬಹುಪಾಲು ಮಂದಿ ರೈತರಿಗೆ ಭೂಮಿಯ ಹಕ್ಕು ದಕ್ಕಿಲ್ಲ ಎಂದು ಜೀವಿಕ ಬಸವರಾಜು ತಿಳಿಸಿದರು.
ಎಚ್.ಡಿ. ಕೋಟೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿಭೆ ಸಂಸ್ಥೆಯ ವತಿಯಿಂದ ನಾವೆಲ್ಲರೂ ಭೂ ಹಕ್ಕುದಾರ ಸಮಿತಿ ರಚಿಸಿಕೊಂಡು ಸರ್ಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್
