• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್‌ ಪ್ಲಾಂಟೇಶನ್‌ನಲ್ಲಿ ಡಾ. ಶೋಭಾ ಬಡಿಗೇರ್ ಸಾಧನೆ
Regional

ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್‌ ಪ್ಲಾಂಟೇಶನ್‌ನಲ್ಲಿ ಡಾ. ಶೋಭಾ ಬಡಿಗೇರ್ ಸಾಧನೆ

CliQ INDIA
Last updated: October 9, 2025 1:45 am
CliQ INDIA
Share
4 Min Read
SHARE

ವಿಜಯಪುರ, 08 ಅಕ್ಟೋಬರ್ (ಹಿ.ಸ.)

ಆ್ಯಂಕರ್ : ವಿಶ್ವದರ್ಜೆಯ ಚಿಕಿತ್ಸೆ ಒದಗಿಸುವ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಆಗಿರುವ ನಾರಾಯಣ ಹೆಲ್ತ್ ಸಿಟಿಯು ಗಂಭೀರವಾದ ರಕ್ತ ಮತ್ತು ರೋಗನಿರೋಧಕ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್‌ ಪ್ಲಾಂಟೇಶನ್‌ ಮೂಲಕ ಚಿಕಿತ್ಸೆ ನೀಡಿ ಅತ್ಯುತ್ತಮ ಸಾಧನೆ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಹೆಮಟೋ-ಆಂಕಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ ಪ್ಲಾಂಟ್, ಪೀಡಿಯಾಟ್ರಿಕ್ ಆಂಕಾಲಜಿ ಕನ್ಸಲ್ಟೆಂಟ್ ಡಾ. ಶೋಭಾ ಬಡಿಗೇರ್ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಮಕ್ಕಳಿಗೆ ಯಶಸ್ವಿಯಾಗಿ ಈ ಟ್ರಾನ್ಸ್‌ ಪ್ಲಾಂಟ್‌ ಚಿಕಿತ್ಸೆಗಳನ್ನು ನಡೆಸಿದ್ದಾರೆ. ಆ ಮೂಲಕ ಅದೆಷ್ಟೋ ಕುಟುಂಬಗಳ ಮನೆಗೆ ಆಶಾಕಿರಣವಾಗಿ ಮೂಡಿಬಂದಿದ್ದಾರೆ.

ಈ ಮಕ್ಕಳ ಪೈಕಿ ಕೆಲವರು ಗಂಭೀರವಾದ ಥಲಸ್ಸೇಮಿಯಾ ಮೇಜರ್ (ಇದು ಹುಟ್ಟಿನಿಂದಲೇ ಬರುವ ಗಂಭೀರ ರಕ್ತ ಸಮಸ್ಯೆಯಾಗಿದ್ದು, ಆಗಾಗ ರಕ್ತ ವರ್ಗಾವಣೆಯ ಅಗತ್ಯ ಇರುತ್ತದೆ), ಜಿ6ಪಿಐ ಕೊರತೆ (ರಕ್ತದ ಕೆಂಪು ರಕ್ತಕಣಗಳು ನಾಶವಾಗುವ ಆನುವಂಶಿಕ ಕಾಯಿಲೆ), ಅಪ್ಲಾಸ್ಟಿಕ್ ಎನಿಮಿಯಾ (ಅಸ್ಥಿ ಮಜ್ಜೆಯು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ನಿಲ್ಲಿಸುವ ಸಂಕೀರ್ಣ ಸ್ಥಿತಿ) ಮತ್ತು ಗಂಭೀರ ಪ್ಲೇಟ್‌ಲೆಟ್ ಸಮಸ್ಯೆಗಳಂತಹ ತೊಂದರೆಗಳಿಂದ ಬಳಲುತ್ತಿದ್ದವು. ಅಂಥಾ ಮಕ್ಕಳಿಗೆ ಈ ಜೀವರಕ್ಷಕ ಚಿಕಿತ್ಸೆ ನೀಡಿ ಅವರ ಜೀವವನ್ನು ನಾರಾಯಣ ಹೆಲ್ತ್ ಸಿಟಿ ಕಾಪಾಡಿದೆ. “ನಾವು ಸ್ಟೆಮ್ ಸೆಲ್ ಟ್ರಾನ್ಸ್‌ ಪ್ಲಾಂಟೇಶನ್ ಮಾಡಿದ ಅತ್ಯಂತ ಚಿಕ್ಕ ರೋಗಿಯ ವಯಸ್ಸು 1.5 ವರ್ಷ ಆಗಿದೆ. ಹಿರಿಯ ರೋಗಿಯ ವಯಸ್ಸು 13 ಆಗಿದೆ. ಅದರಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ದಾನಿ ಎಂದರೆ ಎಂಟು ತಿಂಗಳ ಮಗು ಆಗಿದ್ದು, ದೊಡ್ಡ ವಯಸ್ಸಿನ ದಾನಿ 51 ವರ್ಷದವರು. ಈಗ ಎಲ್ಲರೂ ಚೆನ್ನಾಗಿ ಇದ್ದಾರೆ” ಎಂದು ಹೇಳಿದರು.

ಅಪ್ಲಾಸ್ಟಿಕ್ ಎನಿಮಿಯಾ (ಬೋನ್ ಮ್ಯಾರೋ ಫೇಲ್ಯೂರ್), ಇಮ್ಯುನೋ ಡೆಫಿಶಿಯನ್ಸಿ ಡಿಸಾರ್ಡರ್ ಗಳು (ದುರ್ಬಲ ರೋಗನಿರೋಧಕ ವ್ಯವಸ್ಥೆ) ಮತ್ತು ಗಂಭೀರ ಪ್ಲೇಟ್‌ ಲೆಟ್ ಸಮಸ್ಯೆಗಳು ಕಂಡು ಬಂದ ಮಕ್ಕಳಲ್ಲಿ ಉತ್ತಮ ಫಲಿತಾಂಶ ಪಡೆಯಲು ರೋಗ ನಿರ್ಧಾರದ ನಂತರ ತಕ್ಷಣ ಟ್ರಾನ್ಸ್‌ ಪ್ಲಾಂಟೇಶನ್ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸ್ಟೆಮ್ ಸೆಲ್ ಟ್ರಾನ್ಸ್‌ ಪ್ಲಾಂಟೇಶನ್ ಎಂದರೇನು?

ಸ್ಟೆಮ್ ಸೆಲ್ ಟ್ರಾನ್ಸ್‌ ಪ್ಲಾಂಟೇಶನ್ (ನಾಶ ಹೊಂದಿದ ರಕ್ತ ಉತ್ಪಾದಿಸುವ ಜೀವಕೋಶಗಳನ್ನು ಆರೋಗ್ಯಕರ ಜೀವಕೋಶಗಳಿಂದ ಬದಲಾಯಿಸುವುದು) ಅನ್ನು ಮುಂಚಿತವಾಗಿ ಮಾಡಿಸಿದರೆ ಯಶಸ್ಸಿನ ಪ್ರಮಾಣ ಶೇ.80ಕ್ಕಿಂತ ಜಾಸ್ತಿ ಇರುತ್ತದೆ. ಅಲೋಜೆನಿಕ್ ಎಚ್ ಎಸ್ ಸಿ ಟಿ (ದಾನಿಯ ಸ್ಟೆಮ್ ಸೆಲ್‌ ಗಳನ್ನು ಬಳಸುವುದು) ಚಿಕಿತ್ಸೆ ಮೂಲಕ ಥಲಸ್ಸೇಮಿಯಾ ಮೇಜರ್, ಅಪ್ಲಾಸ್ಟಿಕ್ ಎನಿಮಿಯಾ, ಗಂಭೀರ ಪ್ಲೇಟ್‌ ಲೆಟ್ ಸಮಸ್ಯೆಗಳು, ಜಿ6ಪಿಐ ಕೊರತೆ, ಪ್ರಾಥಮಿಕ ರೋಗನಿರೋಧಕ ಸಮಸ್ಯೆ ಮತ್ತು ಹೈ- ರಿಸ್ಕ್ ಅಥವಾ ಮತ್ತೆ ಬರಬಹುದಾದ ಲ್ಯುಕೇಮಿಯಾಗೆ ಚಿಕಿತ್ಸೆ ಮಾಡಬಹುದಾಗಿದೆ. ಆಟೋಲಾಗಸ್ ಟ್ರಾನ್ಸ್‌ ಪ್ಲಾಂಟ್‌ ಮಾಡುವ ಮೂಲಕ ಹೈ-ರಿಸ್ಕ್ ನ್ಯೂರೋಬ್ಲಾಸ್ಟೋಮಾ ಮತ್ತು ಮೆಡ್ಯುಲೋಬ್ಲಾಸ್ಟೋಮಾದಂತಹ ಕ್ಯಾನ್ಸರ್‌ ಗಳಿಗೆ ಚಿಕಿತ್ಸೆ ನೀಡಬಹುದು ಎಂದರು.

ವೈದ್ಯಕೀಯ ತಜ್ಞರು ಆರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡುವ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವ ಮಹತ್ವದ ಕುರಿತು ಹೇಳುತ್ತಾರೆ, ಇದರಿಂದ ನಿರ್ದಿಷ್ಟವಾಗಿ ಲಿವರ್, ಹೃದಯ ಮತ್ತು ಬೋನ್ ಮ್ಯಾರೋ ಸೇರಿದಂತೆ ಅಂಗಾಂಗಳು ಹಾನಿ ಆಗುವುದನ್ನು ತಡೆಯಬಹುದಾಗಿದೆ. ಥಲಸ್ಸೇಮಿಯಾ ಮೇಜರ್‌ ಸಮಸ್ಯೆ ಇದ್ದಾಗ ಯಾವುದೇ ಅಂಗಗಳ ಗಾಯವಿಲ್ಲದಿದ್ದರೆ 18 ತಿಂಗಳುಗಳಿಂದ ಏಳು ವರ್ಷಗಳ ನಡುವಿನ ಮಕ್ಕಳಿಗೆ ಟ್ರಾನ್ಸ್‌ ಪ್ಲಾಂಟ್ ಮಾಡುವುದು ಉತ್ತಮ. ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಅಂಗಾಂಗಗಳ ಹಾನಿ ಇಲ್ಲದಿದ್ದರೆ ಟ್ರಾನ್ಸ್‌ ಪ್ಲಾಂಟೇಶನ್ ಮಾಡಬಹುದು. ರೋಗಿಯ ಪರಿಸ್ಥಿತಿಗೆ ತಕ್ಕಂತೆ ಟ್ರಾನ್ಸ್‌ ಪ್ಲಾಂಟೇಶನ್ ಪ್ರಕ್ರಿಯೆಯು ಎಂಟು ತಿಂಗಳುಗಳಿಂದ ಒಂದು ವರ್ಷದವರೆಗೆ ನಡೆಯಬಹುದು.

ಥಲಸ್ಸೇಮಿಯಾ ಮೇಜರ್ ಇರುವ ಎರಡು ವರ್ಷದ ಬಾಲಕನಿಗೆ ಅವನ ಪುಟಾಣಿ ಸಹೋದರಿಯ ಸ್ಟೆಮ್ ಸೆಲ್‌ ಗಳನ್ನು ಬಳಸಿ ಟ್ರಾನ್ಸ್‌ ಪ್ಲಾಂಟ್ ಮಾಡಲಾಯಿತು. ಟ್ರಾನ್ಸ್‌ ಪ್ಲಾಂಟ್ ಮಾಡಿದ ನಂತರ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಆಗಿದ್ದು, ಇಬ್ಬರೂ ಸ್ಟೆಮ್ ಸೆಲ್ ಸ್ವೀಕರಿಸಿದವರು ಮತ್ತು ದಾನ ಮಾಡಿದವರು ಇಬ್ಬರೂ ಆರೋಗ್ಯಕರವಾಗಿದ್ದಾರೆ.

ಗ್ಲಾಂಜ್‌ಮ್ಯಾನ್‌ಸ್ ಥ್ರೊಂಬಾಸ್ಥೇನಿಯಾ (ಹುಟ್ಟಿನಿಂದಲೇ ಬರುವ ಗಂಭೀರ ಪ್ರಮಾಣದ ಪ್ಲೇಟ್‌ ಲೆಟ್ ಸಮಸ್ಯೆ) ಸಮಸ್ಯೆ ಇರುವ ಬಾಲಕಿಯೊಬ್ಬಳು ಬಾಲ್ಯದಿಂದಲೇ ರಕ್ತಸ್ರಾವ ಸಮಸ್ಯೆಯನ್ನು ಎದುರಿಸುತ್ತಿದ್ದಳು. 13 ವರ್ಷಗಳ ಹಿಂದೆ ಅವಳ ಸಹೋದರಿ ದಾನಿಯಾಗಿದ್ದು, ಯಶಸ್ವಿಯಾಗಿ ಟ್ರಾನ್ಸ್‌ ಪ್ಲಾಂಟ್ ಮಾಡಿಸಲಾಯಿತು. ಈಗ ಆಕೆ ಪಿಯುಸಿ ಎರಡನೇ ವರ್ಷದ ಪರೀಕ್ಷೆಗೆ ತಯಾರಿ ಮಾಡುತ್ತಿದ್ದು, ವೈದ್ಯಳಾಗಲು ಬಯಸುತ್ತಿದ್ದಾಳೆ.

ಇನ್ನೊಬ್ಬ ಥಲಸ್ಸೇಮಿಯಾ ಮೇಜರ್ ಇರುವ ಶಿಶುವಿಗೆ ಹ್ಯಾಪ್ಲೋಐಡೆಂಟಿಕಲ್ (ಅರ್ಧ ಹೊಂದಾಣಿಕೆ) ಟ್ರಾನ್ಸ್‌ ಪ್ಲಾಂಟ್ ಮಾಡಲಾಗಿದ್ದು, ಎರಡು ವರ್ಷಗಳಿಂದ ರೋಗಮುಕ್ತನಾಗಿದ್ದಾನೆ.

ಟ್ರಾನ್ಸ್ ಫ್ಯುಶನ್ ಅಗತ್ಯವಿರುವ ಜಿ6ಪಿಐ ಡೆಫಿಶಿಯೆನ್ಸಿ ಸಮಸ್ಯೆ ಇರುವ ಎರಡು ಸಹೋದರರಿಗೆ, ಅವರ ಸಹೋದರಿಯಿಂದ ಸ್ಟೆಮ್ ಸೆಲ್ ಪಡೆದು ಚಿಕಿತ್ಸೆ ನೀಡಲಾಯಿತು. ಈಗ ಆ ಸಹೋದರಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮೂರು ಸಹೋದರ, ಸಹೋದರಿಯರೂ ಚೆನ್ನಾಗಿದ್ದಾರೆ. ಈ ಪ್ರದೇಶದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸಲು ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿಯಲ್ಲಿ ನಿಯಮಿತವಾಗಿ ಹೊರರೋಗಿಗಳ ಕ್ಲಿನಿಕ್‌ ಗಳನ್ನು ನಡೆಸುತ್ತಾರೆ.

“ಈ ರೀತಿಯ ಕ್ಲಿನಿಕ್ ನಡೆಸುವುದರಿಂದ ಚಿಕಿತ್ಸೆಯ ಅಗತ್ಯವಿರುವ ಮಕ್ಕಳನ್ನು ಗುರುತಿಸಲು, ಅವರ ಕುಟುಂಬಗಳಿಗೆ ಕೌನ್ಸೆಲಿಂಗ್ ನೀಡಲು ಮತ್ತು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ತಕ್ಷಣ ಟ್ರಾನ್ಸ್‌ ಪ್ಲಾಂಟೇಶನ್ ಮಾಡಿಸಲು ಸಹಾಯ ಮಾಡಬಹುದು” ಎಂದರು.

ಈ ಸಂದರ್ಭದಲ್ಲಿ ಗೋಪಾಲ್ ಎ ಆರ್ (ಕನ್ಸಲ್ಟೆಂಟ್ ನಾರಾಯಣ ಹಾಸ್ಪಿಟಲ್ ಬೆಂಗಳೂರು) ಕಾಶೀನಾಥ ಎಸ್ ಕೋರೆಗೋಳ( ಹಿರಿಯ ಮಾರುಕಟ್ಟೆ ಅಧಿಕಾರಿ ನಾರಾಯಣ ಹೆಲ್ತ್ ಬೆಂಗಳೂರು) ಹಾಗೂ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande

You Might Also Like

ಕರ್ನಾಟಕದಿಂದ ಅಯೋದ್ಯೆಗೆ ಆರು ವಿಶೇಷ ರೈಲು
ದೇವದಾಸಿ ಪದ್ಧತಿ ನಿರ್ಮೂಲನೆಗೆ ಕಾನೂನು ತಿದ್ದುಪಡಿ : ಮುಖ್ಯಮಂತ್ರಿ
ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸುಧಾರಣೆ ಶ್ರಮಿಸಿ : ಪ್ರಕಾಶ
ನಾಳೆ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ – Hindusthan Samachar Kannada
ಸಿ ಎಂ ಆರ್ ಶ್ರೀನಾಥ್ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ,

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಹಿಮಪಾತ – Hindusthan Samachar Kannada
Next Article ಭಾರತ ಹೂಡಿಕೆ, ನಾವೀನ್ಯತೆ ಮತ್ತು ಉತ್ಪಾದನೆಗೆ ಅತ್ಯುತ್ತಮ ತಾಣ : ಪ್ರಧಾನಿ ಮೋದಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?