
ಬಳ್ಳಾರಿ, 9 ಜನವರಿ(ಹಿ.ಸ):
ಆ್ಯಂಕರ್ : ಭಾರತೀಯ ಲೆಕ್ಕ ಪರಿಶೋಧಕರ ಸಂಘ ಮತ್ತು ದ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಅವರ ಸಹಭಾಗಿತ್ವದಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗಾಗಿ `ಸರ್ಟಿಫಿಕೇಟ್ ಕೋರ್ಸ್ ಫಾರ್ ಅಕೌಂಟೆಂಟ್ಸ್ ಆಫ್ ಪಂಚಾಯತ್ಸ್ ಅಂಡ್ ಮುನಿಸಿಪಲ್ ಬಾಡೀಸ್’ ಅನ್ನು ಏರ್ಪಡಿಸಲಾಗುತ್ತಿದ್ದು ಪ್ರಥಮ ಬ್ಯಾಚ್ಗೆ ಸೇರಲು ಜನವರಿ 31 ಕೊನೆಯ ದಿನವಾಗಿದೆ.
ಭಾರತೀಯ ಲೆಕ್ಕ ಪರಿಶೋಧಕರ ಸಂಘದ ದಕ್ಷಿಣ ಭಾರತ ಪ್ರಾಂತೀಯ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ಸುದ್ದಿಗಾರರಿಗೆ ಮಂಗಳವಾರ ಈ ಮಾಹಿತಿ ನೀಡಿದ್ದು, ಕೇವಲ 500 ರುಪಾಯಿ ಶುಲ್ಕ, 90 ರೂಪಾಯಿ ಜಿಎಸ್ಟಿ ಶುಲ್ಕವನ್ನು ಸಂಗ್ರಹ ಮಾಡಿ, ಉಚಿತವಾಗಿ ಪಠ್ಯ ಮತ್ತು ಪೂರಕ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ. ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳ ಸ್ಕ್ರೀನಿಂಗ್ ಪರೀಕ್ಷೆ, ಅಕೌಂಟೆನ್ಸಿ ಮತ್ತು ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳ ಸಮ್ಮಿಶ್ರದಲ್ಲಿ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ವರ್ಷದಲ್ಲಿ ಎರೆಡು ಬ್ಯಾಚ್ಗಳಿಗೆ ಪರೀಕ್ಷೆ ನಡೆಯಲಿದ್ದು, ನೋಂದಣಿ ಪ್ರಕ್ರಿಯೆಯು ವರ್ಷಪೂರ್ತಿ ನಡೆಯಲಿದೆ ಎಂದು ಹೇಳಿದರು.
ಈ ಕೋರ್ಸ್ನ ಪ್ರಮಾಣಪತ್ರವನ್ನು ಪಡೆದವರು ಸ್ಥಳೀಯ ಸಂಸ್ಥೆಗಳ ಲೆಕ್ಕಪತ್ರ ನಿರ್ವಹಣೆಯಲ್ಲಿ ಸುಲಭವಾಗಿ ನಿಯೋಜನೆಗೊಳ್ಳಬಹುದು. ಈ ಪ್ರಮಾಣಪತ್ರವು ವೃತ್ತಿ ಕೌಶಲ್ಯವನ್ನು ಹೆಚ್ಚಿಸಲಿದೆ. ಕೋರ್ಸ್ನಲ್ಲಿ ಕನ್ನಡ ವಿಷಯದಲ್ಲೂ ಪರೀಕ್ಷೆಯನ್ನು ಬರೆಯಬಹುದಾಗಿದೆ ಎಂದರು.
ವಿವರಗಳಿಗಾಗಿ https://lba.icaiarf.org.in ಭೇಟಿ ಮಾಡಿ, ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆಗೆ ಆನ್ಲೈನ್ ಕೋಚಿಂಗ್ ವ್ಯವಸ್ಥೆ ಇದೆ. ಬಳ್ಳಾರಿ ಶಾಖೆಯು ಡಿಸೆಂಬರ್ನಿಂದ ಉಚಿತವಾಗಿ ಕೋಚಿಂಗ್ ತರಗತಿಗಳನ್ನು ನಡೆಸಲಿದೆ ಎಂದರು.
ಬಳ್ಳಾರಿ ಸಿಎ ಶಾಖೆಯ ಉಪಾಧ್ಯಕ್ಷ ವೆಂಕಟನಾರಾಯಣ, ಕಾರ್ಯದರ್ಶಿ ಪುರುಷೋತ್ತಮರೆಡ್ಡಿ, ಖಜಾಂಚಿ ಕೆ.ವಿ. ಸ್ವಪ್ನಪ್ರಿಯ, ಸದಸ್ಯರಾದ ಡಿ. ಗಜರಾಜ್, ವಿ. ವಿಶ್ವನಾಥ ಆಚಾರ್, ಕೋಮಲ್ ಜೈನ್ ಇನ್ನಿತರರು ಉಪಸ್ಥಿತರಿದ್ದರು.
