ಬಳ್ಳಾರಿ, 23 ಡಿಸೆಂಬರ್(ಹಿ.ಸ):
ಆ್ಯಂಕರ್ : ಉದಯವಾಣಿ ವರದಿಗಾರ, ಸಹೋದ್ಯೋಗಿ ಸೂರ್ಯಕಾಂತ ಜಮಾದಾರ ಅವರ ತಂದೆಯವರಾದ ಮಲಕಪ್ಪ ಎಚ್. ಜಮಾದಾರ(75) ಇವತ್ತು ಶನಿವಾರ ಬೆಳಗಿನ ಜಾವ ನಿಧನರಾದರು.
ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿಯಾಗಿದ್ದ ಮಲಕಪ್ಪ ಜಮಾದಾರ ಅವರ ಅಂತ್ಯಕ್ರಿಯೆಯು ಇಂದು ಡಿ. 23ರ ಶನಿವಾರ ಸಂಜೆ 4 ಕ್ಕೆ ಅಫಜಲಪುರ ಪಟ್ಟಣದ ಸ್ವಂತ ಹೊಲದಲ್ಲಿ ನೆರವೇರಿತು.
ಮೃತರು ಪತ್ರಕರ್ತ ಸೂರ್ಯಕಾಂತ ಜಮಾದಾರ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
