ಬೆಂಗಳೂರು, 11 ಜನವರಿ(ಹಿ.ಸ):
ಆ್ಯಂಕರ್ :
ಕರ್ನಾಟಕದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ನಿನ್ನೆಯಷ್ಟೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದರು. ಆ ಮೂಲಕ ಹೆಚ್ಚುವರಿ ಡಿಸಿಎಂ ಆಯ್ಕೆಗೆ ಫುಲ್ಸ್ಟಾಪ್ ಇಟ್ಟಿದ್ದರು. ಆದರೆ, ಇಂದು ಹೈಕಮಾಂಡ್ ಭೇಟಿಗೂ ಮುನ್ನ ಸಚಿವ ಕೆಎನ್ ರಾಜಣ್ಣ ಅವರು ಹೆಚ್ಚುವರಿ ಡಿಸಿಎಂ ಆಯ್ಕೆ ಬಗ್ಗೆ ಮತ್ತೆ ಮಾತೆತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಲೋಕಸಭಾ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಮಾಡಿದರೆ ಒಳ್ಳೆಯದಾಗುತ್ತದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ಗೆ ಸಲಹೆ ನೀಡಿದ್ದೇವೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧರಿರುವುದಾಗಿ ಹೇಳಿದರು.
ದೆಹಲಿಗೆ ಹೋಗುತ್ತಿರುವ ವಿಚಾರವಾಗಿ ಮಾತನಾಡಿದ ರಾಜಣ್ಣ, ವರಿಷ್ಠರು 28 ಕ್ಷೇತ್ರಗಳ ಉಸ್ತುವಾರಿ ಸಚಿವರ ಸಭೆ ಕರೆದಿದ್ದಾರೆ. 28 ಕ್ಷೇತ್ರಗಳ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರು.
ರಾಮಮಂದಿರ ಉದ್ಘಾಟನೆಗೆ ಕಾಂಗ್ರೇಸ್ ನಾಯಕರು ಹೋಗದಿರಲು ನಿರ್ಧರಿಸಿದ ವಿಚಾರವಾಗಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಮ್ಮ ನಾಯಕರು ಈಗಾಗಲೇ ಕಾರಣ ತಿಳಿಸಿದ್ದಾರೆ ಎಂದರು.
ಎಲ್ಲಾ ಊರುಗಳಲ್ಲೂ ಸಾವಿರಾರು ವರ್ಷಗಳ ಇತಿಹಾಸವಿರುವ ರಾಮನ ದೇವಸ್ಥಾನಗಳಿವೆ. ಈಗ ವಿಶೇಷ ಏನಪ್ಪ ಅಂದರೆ ರಾಮನ ಜನ್ಮಭೂಮಿಯಲ್ಲಿ ಮಂದಿರ ಆಗಿದೆ. ಈಗಾಗಲೆ ನಮ್ಮ ಹೈಕಮಾಂಡ್ ಕಾಂಗ್ರೇಸ್ ನಾಯಕರು ಭಾಗವಹಿಸಲ್ಲ ಅಂತ ಕಾರಣ ನೀಡಿದ್ದಾರೆ. ಶ್ರೀರಾಮನ ರಾಮಾಯಣ ಕತೃ ವಾಲ್ಮೀಕಿ. ವಾಲ್ಮೀಕಿಯ ದೇವಸ್ಥಾನ ಕಟ್ಟಬೇಕು ಅನ್ನೋದು ನಮ್ಮ ಎಲ್ಲಾ ಸಮುದಾಯದ ಆಗ್ರಹವಾಗಿದೆ. ನಾವು ಈ ಹಿಂದೆ ರಾಮಲಲ್ಲಾನನ್ನು ಟೆಂಟ್ನಲ್ಲಿ ಕೂರಿಸಿದಾಗ ಹೋಗಿ ಬಂದಿದ್ದೆವು. ಮುಂದೆನೂ ಹೋಗುತ್ತೇವೆ. ಅದು ವೈಯುಕ್ತಿಕ ವಿಚಾರ. ಈಗ ಹೈಕಮಾಂಡ್ ತೀರ್ಮಾನ ಮಾಡಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್
