• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಕ್ಲಸ್ಟರ್ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕಾಗಿ ಪ್ರಸ್ತಾವನೆಗಳಿಗೆ ಆಹ್ವಾನ
Regional

ಕ್ಲಸ್ಟರ್ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕಾಗಿ ಪ್ರಸ್ತಾವನೆಗಳಿಗೆ ಆಹ್ವಾನ

CliQ INDIA
Last updated: November 21, 2025 7:47 am
CliQ INDIA
Share
3 Min Read
SHARE

ಬಳ್ಳಾರಿ, 20 ನವೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಂಡಳಿ ವತಿಯಿಂದ ಕ್ಲಸ್ಟರ್ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕಾಗಿ ಪ್ರಸ್ತಾವನೆಗಳಿಗೆ ಆಹ್ವಾನಿಸಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಒಣಮೆಣಸಿನಕಾಯಿ, ಈರಳ್ಳಿ, ಬಾಳೆ, ದಾಳಿಂಬೆ ಮತ್ತು ಅಂಜೂರ ಬೆಳೆಗಳ ಕ್ಲಸ್ಟರ್ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮಾಡಲು ಅವಕಾಶವಿದ್ದು, ಅನುಷ್ಠಾನ ಮಾಡಲು ಎಷ್ಟಿಮೆಟಿಂಗ್ ಏಜೆನ್ಸಿಗಳು ಮುಂದೆ ಬಂದಲ್ಲಿ ರೈತರಿಗೆ ಹೆಚ್ಚಿನ ಸಹಾಯಧನ ಮತ್ತು ನೆರವು ಒದಗಿಸಿಕೊಡಲಾಗುತ್ತದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು (ಎನ್‍ಹೆಚ್‍ಬಿ) ದೇಶದ ಹಣ್ಣು, ತರಕಾರಿ, ಪುಷ್ಪ, ತೋಟದ ಬೆಳೆ ಮತ್ತು ಸಂಬಾರು ಬೆಳೆಗಳ ಸಮಗ್ರ ಅಭಿವೃದ್ಧಿ ಗುರಿ ಹೊಂದಿದ್ದು, ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (ಸಿಡಿಪಿ) ಎಂಬ ಹೊಸ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನ ಮಾಡಲು ಕ್ರಮಕೈಗೊಂಡಿದೆ.

ಈ ಯೋಜನೆಯ ಮುಖ್ಯ ಉದ್ದೇಶ, ಒಂದು ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯಬಹುದಾದ ಬೆಳೆಯನ್ನು ಕ್ಲಸ್ಟರ್ ರೂಪದಲ್ಲಿ ಒಗ್ಗೂಡಿಸಿ ಉತ್ಪಾದನೆ-ಸಂಸ್ಕರಣೆ-ಸಂಗ್ರಹ-ಮಾರುಕಟ್ಟೆ-ರಫ್ತು ಸರಪಳಿಯನ್ನು ಬಲಪಡಿಸುವುದಾಗಿದೆ.

ಈ ಕ್ಲಸ್ಟರ್ ಗಳಿಗೆ ಎನ್.ಹೆಚ್.ಬಿ ಯಿಂದ ಹಣಕಾಸು ನೆರವು ನೀಡಲಾಗುವುದು. ರಾಷ್ಟ್ರೀಯ ತೋಟಗಾರಿಕೆ ಬೋರ್ಡ್ (ಎನ್.ಹೆಚ್.ಬಿ) ಸಿ.ಡಿ.ಪಿ ಯನ್ನು ಜಾರಿಗೆ ತರಲು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.

ರಾಜ್ಯ ತೋಟಗಾರಿಕೆ ಮಿಷನ್ ಸಿ.ಡಿ.ಪಿ ಜಾರಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಜವಾಬ್ದಾರಿಯಾಗಿದ್ದು, ಇದರ ಪ್ರಮುಖ ಪಾತ್ರವು ಬೆಳೆಯ ಕ್ಲಸ್ಟರ್ ಆಯ್ಕೆ, ಕಾರ್ಯಗತಗೊಳಿಸುವ ಸಂಸ್ಥೆ ಗುರುತಿಸುವುದು (ಐ.ಎ), ಯೋಜನೆಯ ಮೇಲ್ವಿಚಾರಣೆ ಮತ್ತು ತಳಮಟ್ಟದ ಪರಿಶೀಲನೆಯಾಗಿದೆ. ಕ್ಲಸ್ಟರ್ ನಲ್ಲಿನ ಗುರುತಿಸಲಾದ ಪ್ರಮುಖ ಬೆಳೆಯ ವಾರ್ಷಿಕ ಫಾರ್ಮ್ ಗೇಟ್ ಮೌಲ್ಯ (ಎಫ್.ಜಿ.ವಿ) ಕನಿಷ್ಠ 100 ಕೋಟಿ ಇದ್ದೇ ಇರಬೇಕು.

ಕ್ಲಸ್ಟರ್ ನ ಗ್ರಾಮಗಳು ಗರಿಷ್ಠ ಮೂರು ಜಿಲ್ಲೆಗೆ ಮಾತ್ರ ಸೀಮಿತವಾಗಿರಬೇಕು. ಈ ಯೋಜನೆಯನ್ನು ಕಾರ್ಯಗತಗೊಳಿಸುವ ಸಂಸ್ಥೆ (ಇಂಪ್ಲಿಮೆಂಟಿಂಗ್ ಏಜೆನ್ಸಿ) (ಐ.ಎ) ಮೂಲಕ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆದು ಅನುಷ್ಠಾನ ಮಾಡುವುದು ಕಡ್ಡಾಯವಾಗಿದೆ. ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಕಾನೂನುಬದ್ದ ಸಂಸ್ಥೆಗಳಾಗಿರಬೇಕು. ಅವು ರೈತ ಉತ್ಪಾದಕ ಮತ್ತು ಅವುಗಳ ಫೆಡರೇಶನ್ ಗಳು, ಸಹಾಕಾರ ಸಂಘಗಳು, ಪಾಲುದಾರಿಕೆ ಫರ್ಮ್ ಗಳು, ಕಂಪನಿಗಳು ಅಥವಾ ಇವೆಲ್ಲದರ ಸಂಯೋಜನೆ ಸೇರಬಹುದು.

ಇಂಪ್ಲಿಮೆಂಟಿಂಗ್ ಏಜೆನ್ಸಿಯಾಗಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಖರ್ಚಿನ ಘಟಕಕ್ಕೆ ಬೇಕಾದ ಈಕ್ವಿಟಿ ಕೊಡುಗೆಗೆ ಸಮಾನವಾದ ಅಥವಾ ಅದಕ್ಕಿಂತ ಹೆಚ್ಚು ನೆಟ್ ವರ್ತ್ ಸಂಸ್ಥೆಯು ಹೊಂದಿರಬೇಕು. ಸಂಸ್ಥೆಯು ಯೋಜನೆಗೆ ಐಎ ಕಾಸ್ಟ್ ಕಂಪೋನೆಂಟ್ ಕನಿಷ್ಠ ಶೇ.20 ಅನ್ನು ಈಕ್ವಿಟಿಯಾಗಿ ಹೂಡಿಕೆ ಮಾಡಿರಬೇಕು.

ಸಂಸ್ಥೆಯು ಕೃಷಿ/ ತೋಟಗಾರಿಕೆ ಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು ಮತ್ತು ಅದು ದಾಖಲೆ ಆಧಾರಿತವಾಗಿರಬೇಕು. ಸಂಸ್ಥೆಯ ವಾರ್ಷಿಕ ಒಟ್ಟು ಆದಾಯ ಯೋಜನೆಯ ಒಟ್ಟು ವೆಚ್ಚಕ್ಕೆ ಸಮಾನವಾಗಿರಬೇಕು. ಐಎ ಕಾಸ್ಟ್ ಕಂಪೋನೆಂಟ್ ಕನಿಷ್ಠ ಶೇ.20 ಕ್ಕೆ ಸಮಾನವಾದ ಸಾಲವನ್ನು ಆರ್‍ಬಿಐ ಅನುಮೋದಿತ ವ್ಯವಹಾರಿಕ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯಬೇಕು. ಈ ಯೋಜನೆಯ ಪೂರ್ಣ ಅನುಷ್ಠಾನ ಇಪ್ಲಿಮೆಂಟಿಂಗ್ ಎಜೆನ್ಸಿಯದ್ದಾಗಿದ್ದು, ಯೋಜನೆಯ ವ್ಯಾಪ್ತಿ, ಗುರಿಗಳು, ವಿಧಾನ ಮತ್ತು ಹಣಕಾಸು ಯೋಜನೆ ಒಳಗೊಂಡ ವಿಸ್ತ್ರುತ ಯೋಜನಾ ವರದಿ (ಡಿ.ಪಿ.ಆರ್) ತಯಾರಿಸಿ, ಅನುಮೋದನೆ ಪಡೆಯುವುದರಿಂದ ಅನುಷ್ಠಾನದವರೆಗಿನ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಬೇಕು.

ಇಪ್ಲಿಮೆಂಟಿಂಗ್ ಎಜೆನ್ಸಿಗೆ ನೀಡಲಾಗುವ ಗರಿಷ್ಠ ಹಣಕಾಸು ಸಹಾಯವು ಕ್ಲಸ್ಟರ್ ನ ಮುಖ್ಯ ಬೆಳೆಯ ವಾರ್ಷಿಕ ಫಾರ್ಮ್ ಗೇಟ್ (ಎಫ್.ಜಿ.ವಿ) ಮೌಲ್ಯದ ಶೇ.25 ವರೆಗೆ ಇರಲಿದೆ. ರೈತರಿಗೆ ನೀಡುವ ನೆರವು ಐಎ ಗೆ ನೀಡುವ ನೆರವಿಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ.

ರೈತರ ಹಾಗೂ ಐಎ ಗೆ ಇಬ್ಬರಿಗೂ ನೀಡಲಾಗುವ ಹಣಕಾಸು ಸಹಾಯವು ಮಾರ್ಗಸೂಚಿಗಳಲ್ಲಿ ನೀಡಿರುವ ಘಟಕ ವೆಚ್ಚದ ಪ್ರಕಾರವಾಗಿರುತ್ತದೆ. ಐಎ ಗೆ ನೀಡುವ ಹಣಕಾಸು ನೆರವು ಕ್ರೇಡಿಟ್ ಲಿಂಕ್ ಆಗಿರುತ್ತದೆ.

ರೈತ ಘಟಕದ ಸಹಾಯಧನವನ್ನು ಸಿಡಿಪಿ ಸುರಕ್ಷಾ ಪೋರ್ಟಲ್ ಮೂಲಕ ಡಿಬಿಟಿ ಮಾದರಿಯಲ್ಲಿ ನೇರವಾಗಿ ಜಮಾ ಮಾಡಲಾಗುವುದು. ಯೋಜನೆಯ ಅನುಷ್ಠಾನದ ಅವಧಿ ಗರಿಷ್ಠ 3 ವರ್ಷದಾಗಿದ್ದು, ಇಂಪ್ಲಿಮೆಂಟಿಂಗ್ ಏಜೆನ್ಸಿ ಯೋಜನೆಯನ್ನು ಸಂಪೂರ್ಣವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದರೆ ಶೇ.5 ಹೆಚ್ಚುವರಿ ಪ್ರೋತ್ಸಾಹ ಧನ ದೊರೆಯಲಿದೆ.

ಹೊಸ ತಂತ್ರಜ್ಞಾನ, ನವೀನ ಚಟುವಟಿಕೆಗಳಿಗೆ ಹೆಚ್ಚಿನ ನೆರವು ನೀಡಲಾಗುವುದು. ಎಲ್ಲಾ ಅನುದಾನಗಳನ್ನು ಸಿಡಿಪಿ ಸುರಕ್ಷಾ ಪೋರ್ಟಲ್ ಮೂಲಕ ಡಿಜಿಟಲ್ ರೀತಿಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ ಕೋಟಿಮನಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ : ಮುಖ್ಯಮಂತ್ರಿ ಎಚ್ಚರಿಕೆ
ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತಗೆ ರಾಜ್ಯೋತ್ಸವ ರತ್ನ ಪ್ರಶಸ್ತಿ
ನ.19 ರಂದು ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರ ಕಾರ್ಯಗಾರ
ರೈಲುಗಳ ತಾತ್ಕಾಲಿಕ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ
ಕಾಶಿ ವಿಶ್ವೇಶ್ವರನ ಕಲ್ಯಾಣೋತ್ಸವ, ತೆಪ್ಪೋತ್ಸವಕ್ಕೆ ಹರಿದು ಬಂದ ಭಕ್ತಸಾಗರ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಖಾದಿ ಸ್ವಾವಲಂಬನೆ ಮತ್ತು ಸ್ವದೇಶಿ ಸಂಕೇತವಾಗಿದೆ: ಕೆವಿಐಸಿ ಅಧ್ಯಕ್ಷ ಮನೋಜ್ ಕುಮಾರ್
Next Article ಪಾಕಿಸ್ತಾನದ ಖೈಬರ್ ಪ್ರಾಂತದಲ್ಲಿ ಭೂಕಂಪ – Hindusthan Samachar Kannada
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?