
ಬಳ್ಳಾರಿ,, 6 ಜನವರಿ(ಹಿ.ಸ):
ಆ್ಯಂಕರ್: ಸ್ಪಾಂಜ್ ಐರನ್ ಸಾಗಾಣಿಕೆ ವೆಚ್ಚ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ಸ್ಪಾಂಜ್ ಐರನ್ ಓರ್ ಕೈಗಾರಿಕೆಗಳ ಸಂಘಟನೆಯ ಮಧ್ಯೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು `ಮಧ್ಯಸ್ಥಿಕೆ’ ವಹಿಸಿ ಪರಸ್ಪರ ಮಾತುಕತೆಯ ಮೂಲಕ ಬೆಲೆ ಏರಿಕೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿದ್ದು, ಮುಷ್ಕರ ನಿರತರು ಶನಿವಾರದಿಂದ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸಾಗಾಣಿಕೆ ವೆಚ್ಚವನ್ನು ಹೆಚ್ಚಳ ಮಾಡಲು ಆಗ್ರಹಿಸಿ ಜನವರಿ 3 ರಿಂದ ಪ್ರತಿಭಟನೆ ನಡೆಸಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು `ಮಧ್ಯಸ್ಥಿಕೆ’ವಹಿಸಿ ಬೆಲೆ ಏರಿಕೆ ವಿಷಯವನ್ನು ಇತ್ಯರ್ಥಪಡಿಸಲು ಮನವಿ ಮಾಡಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷ ಯಶವಂತರಾಜ್ ಮತ್ತು ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು, ಸಂಸ್ಥೆಯ ಪರವಾಗಿ `ಮಧ್ಯಸ್ಥಿಕೆ’ವಹಿಸಿ ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪೆದ್ದಣ್ಣ, ಗೌರವ ಅಧ್ಯಕ್ಷ ಎಸ್. ಓಬಳೇಶ್ ಮತ್ತು ಕಾರ್ಯದರ್ಶಿ ಎ.ಎನ್. ಬಸವರಾಜ್ ಮತ್ತು ಸ್ಪಾಂಜ್ ಐರನ್ ಅಸೋಸಿಯೇಷನ್ನ ಅಧ್ಯಕ್ಷ ಟಿ. ಶ್ರೀನಿವಾಸರಾವ್ (ವಾಸು) ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಸ್ಪಾಂಜ್ ಐರನ್ ಸಾಗಾಣಿಕೆ ವೆಚ್ಚವನ್ನು ಸೌಹಾರ್ದಯುತವಾಗಿ ಪರಿಹರಿಸುವ ಮೂಲಕ ಪ್ರತಿಭಟನಾ ಲಾರಿ ಮಾಲೀಕರ ಜೊತೆ ಹೊಸ ಬೆಲೆಯ ಒಪ್ಪಂದವನ್ನು ಮಾಡಿಕೊಂಡಿದ್ದು, ಹೊಸ ಬೆಲೆಯು ಜೂನ್ 2024ರವರೆಗೆ ಚಾಲನೆಯಲ್ಲಿರಲಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷ ಯಶವಂತರಾಜ್ ಮತ್ತು ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು, ಪ್ರತಿಭಟನಾ ನಿರತ ಲಾರಿ ಮಾಲೀಕರು ಮತ್ತು ಸ್ಪಾಂಜ್ ಐರನ್ ಅಸೋಸಿಯೇಷನ್ನ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಪ್ರತಿಭಟನಾ ನಿರತ ಲಾರೀ ಮಾಲೀಕರ ಮನವೊಲಿಸಿ, ಬೆಲೆಯನ್ನು ಹೆಚ್ಚಿಸಿ ಪ್ರತಿಭಟನೆಯನ್ನು ಕೈಬಿಡಲು ಮನವಿ ಮಾಡಲಾಯಿತು. ಲಾರೀ ಮಾಲೀಕರು ಶನಿವಾರದಿಂದ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
