
ಬೆಂಗಳೂರು,15 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಅ.15- ಹಿರಿಯ ಕಲಾವಿದರ ಬಳಿಯೇ ಕಮಿಷನ್ ಕೇಳುತ್ತಿರುವ ಕಾಂಗ್ರೆಸ್ ಶೇ.60ರಷ್ಟು ಸರ್ಕಾರವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಗುತ್ತಿಗೆದಾರರ ಬಳಿ ಕೋಟಿ ಕೋಟಿ ಹಣ ಪತ್ತೆಯಾಗುತ್ತಿರುವ ಪ್ರಕರಣವನ್ನು ಸಿಬಿಐ ತನಿಖಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಡಹಬ್ಬಕ್ಕೆ ಕಳಂಕ ತರುವ ರೀತಿಯಲ್ಲಿ ಈ ಸರಕಾರದ ಹಗರಣಗಳು, ಭ್ರಷ್ಟಾಚಾರದ ಅಸ್ಥಿಪಂಜರಗಳು ಪ್ರತಿನಿತ್ಯ ಹೊರಕ್ಕೆ ಬರುತ್ತಿವೆ. ದಸರಾ ಉತ್ಸವದಲ್ಲಿ ಖ್ಯಾತ ಸರೋದ್ ವಾದಕ, ಪದ್ಮಶ್ರೀ ಪುರಸ್ಕøತ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ಆಯೋಜಿಸಲು 5 ಲಕ್ಷ ಕಾರ್ಯಕ್ರಮದ ಆಯೋಜನೆಗೆ 3 ಲಕ್ಷ ಲಂಚ ಎಂದಾದರೆ, ಶೇ.60 ಲಂಚ ಕೇಳಿದಂತಾಗಿದೆ. ಹಿರಿಯ ಕಲಾವಿದರ ಬಳಿಯೇ ಶೇ.60 ಲಂಚ ಕೇಳುವುದಾದರೆ ನಾಡಹಬ್ಬಕ್ಕೆ ಇದಕ್ಕಿಂತ ಕಳಂಕ ಬೇರೊಂದಿಲ್ಲ. ಇಷ್ಟು ಮಾತ್ರವಲ್ಲ; ಈ ಸರಕಾರ ಕಲಾವಿದರನ್ನೂ ಬಿಡುತ್ತಿಲ್ಲ; ಇನ್ನು ಬೇರೆಯವರನ್ನು ಬಿಡುವರೇ ಎಂದು ಪ್ರಶ್ನಿಸಿದರು.
ಹಿಂದೂಸ್ತಾನ್ ಸಮಾಚಾರ್
