• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಂದ ಅನಿರೀಕ್ಷಿತ ಭೇಟಿ
Regional

ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಂದ ಅನಿರೀಕ್ಷಿತ ಭೇಟಿ

CliQ INDIA
Last updated: August 29, 2025 10:11 am
CliQ INDIA
Share
5 Min Read
SHARE
ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರಿಂದ ವಿವಿಧೆಡೆ  ಅನಿರೀಕ್ಷಿತ ಭೇಟಿ;
ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರಿಂದ ವಿವಿಧೆಡೆ  ಅನಿರೀಕ್ಷಿತ ಭೇಟಿ;
ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರಿಂದ ವಿವಿಧೆಡೆ  ಅನಿರೀಕ್ಷಿತ ಭೇಟಿ;

ರಾಯಚೂರು, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಪೂರ್ವ ನಿಗದಿಯಂತೆ ಜಿಲ್ಲೆಗೆ ಭೇಟಿ ನೀಡಿ ಬೆಳಗ್ಗೆಯಿಂದಲೇ ಅನಿರೀಕ್ಷಿತ ಭೇಟಿ ಆರಂಭಿಸಿ ಬಿರುಸಿನ ಸಂಚಾರ ಮಾಡಿದರು.

ರಾಜಧಾನಿ ಬೆಂಗಳೂರಿನಿಂದ ಉದ್ಯಾನ ಎಕ್ಸಪ್ರೆಸ್ ರೈಲು ಮೂಲಕ ಬೆಳಗ್ಗೆ 4.30ರ ವೇಳೆಗೆ ರಾಯಚೂರ ನಗರಕ್ಕೆ ಆಗಮಿಸಿದ ಲೋಕಾಯುಕ್ತರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹೊಸ ಅತಿಥಿ ಗೃಹಕ್ಕೆ ಆಗಮಿಸಿ ಚಹಾ ವಿರಾಮದ ನಂತರ ಬೆಂಗಳೂರನ ಲೋಕಾಯುಕ್ತ ಕಚೇರಿಯ ಅಪರ ನಿಬಂಧಕರಾದ ರಮಾಕಾಂತ ಚವ್ಹಾಣ್, ಶಿವಾಜಿ ಅನಂತ ನಲವಾಡೆ ಮತ್ತು ಉಪ ನಿಬಂಧಕರಾದ ಅರವಿಂದ ಮತ್ತು ಇನ್ನೀತರ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ಕಾರ್ಯಾಚರಣೆಗಿಳಿದರು.

ಬೆಳಗ್ಗೆ 6.45ಕ್ಕೆ ಕೃಷಿ ಆವರಣದಿಂದ ಹೊರಟು ನೇರವಾಗಿ ಹೈದ್ರಬಾದ್ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆ ಆವರಣಕ್ಕೆ 7.30ರ ಸುಮಾರಿಗೆ ಭೇಟಿ ನೀಡಿದರು.

ಮಾರುಕಟ್ಟೆಯಲ್ಲಿದ್ದ ತರಕಾರಿಯ ಗುಣಮಟ್ಟ, ಮಾರಾಟದ ಪ್ರಕ್ರಿಯೆ ಬಗ್ಗೆ ಮಾಲೀಕರು ಮತ್ತು ಹಮಾಲರಿಂದ ಮಾಹಿತಿ ಪಡೆದುಕೊಂಡರು. ಕಾಯಿಪಲ್ಲೆ ಚೀಲವನ್ನು ತೂಕದ ಯಂತ್ರಗಳಲ್ಲಿಟ್ಟು ಯಂತ್ರದ ಪ್ರಮಾಣ ಪರೀಕ್ಷಿಸಿದರು.

ತರಕಾರಿ ಮಾರಾಟಗಾರ ಮಹಮ್ಮದ್ ಇಖ್ಬಾಲ್ ಅವರನ್ನು ಮಾತನಾಡಿಸಿ ತರಕಾರಿ ಮಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡರು. ಹಮಾಲಿಗಳಿಗೆ ತಮ್ಮ ಬಳಿ ಕರೆಯಿಸಿಕೊಂಡು, ನೀವು ಇನ್ಶೂರನ್ಸ್ ಮಾಡಿಸಿದ್ದೀರಾ? ಪ್ರತಿ ದಿನ ಎಷ್ಟು ಸಂಪಾದನೆ ಮಾಡ್ತೀರಾ? ಎಂದು ಕೇಳಿದರು. ಹಮಾಲಿಗಳು ಹೆಚ್ಚಾಗಿ ಬಿಹಾರ ರಾಜ್ಯದವರಿದ್ದಾರೆ ಎಂದು ಲೇಬರ್ ಅಧಿಕಾರಿ ಶ್ರೀಹರಿ ಮಾಹಿತಿ ನೀಡಿದರು.

ಹಮಾಲಿಗಳು ನಿತ್ಯ ತಂಗುವ ಸ್ಥಳ, ಅವರಿಗೆ ನೀಡುವ ಸೌಕರ್ಯದ ಬಗ್ಗೆ ಇದೆ ವೇಳೆ ಲೋಕಾಯುಕ್ತರು ಖುದ್ದು ಪರಿಶೀಲಿಸಿದರು.

ಪ್ರತಿಯೊಬ್ಬರಿಗೂ ಗೌರವಯುತ ಜೀವನ ನಡೆಸುವ ಹಕ್ಕಿದೆ ಎಂದು ಸಂವಿಧಾನದ ಕಲಂ 21 ಹೇಳುತ್ತದೆ. ಕೂಲಿಗಳನ್ನು ಪ್ರಾಣಿಗಳಂತೆ ಕಾಣದೇ, ಕೀಳಾಗಿ ಭಾವಿಸದೇ ಅವರಿಗೆ ಸರಿಯಾದ ಸೌಕರ್ಯ ಕಲ್ಪಿಸಬೇಕು. ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಿ ಎಂದು ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಪಿಎಂಸಿ ಬೈಲಾದಂತೆ ಪಾರ್ಮ 25 ಸರಿಯಾಗಿ ಪಾಲನೆಯಾಗಬೇಕು ಎಂದು ನಿರ್ದೇಶನ ನೀಡಿದರು. ಹಮಾಲಿಗಳಿಗೆ ಕಡ್ಡಾಯ ರಿಜಿಸ್ಟರ್ ಮಾಡಿಸಿ, ಫೆÇೀಟೊ, ದಾಖಲಾತಿ ಇಟ್ಟುಕೊಳ್ಳಬೇಕು. ಅವರಿಗೆ ಪಿಎಫ್, ವಿಮೆ ಸಿಗುವ ಹಾಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಹಮಾಲಿಗಳೆಲ್ಲರು ಶ್ರಮದ ಕೆಲಸ ಮಾಡುತ್ತೀರಿ. ಗುಟಕಾ, ಸೀಗರೇಟು ಬಳಸಬೇಡಿ ಎಂದು ಅವರಿಗೆ ಆರೋಗ್ಯದ ಬಗ್ಗೆ ಪಾಠ ಮಾಡಿದರು.

ಅನ್ನದಾತರಾದ ರೈತರಿಗೆ ಮೋಸ ಮಾಡಬೇಡಿ ಎಂದು ಇದೆ ವೇಳೆ ಲೋಕಾಯುಕ್ತರು ಎಪಿಎಂಸಿ ತರಕಾರಿ ಮಾರುಕಟ್ಟೆ ಮಾಲೀಕರಿಗೆ ಮತ್ತು ಏಜೆಂಟರಿಗೆ ಎಚ್ಚರಿಕೆ ನೀಡಿದರು.

ಎಪಿಎಂಸಿ ಅಧಿಕಾರಿಗಳು ಇದುವರೆಗೆ ರೈತರ ಮತ್ತು ಟ್ರೇಡರ್ಸ ಸಭೆ ಮಾಡಿಲ್ಲ ಎಂದು ಲೋಕಾಯುಕ್ತರ ಎದುರು ರೈತರು ದೂರಿದರು. ಎಪಿಎಂಸಿ ಅಧಿಕಾರಿಗಳಿಗೆ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಲೋಕಾಯುಕ್ತರು, ಅಧಿಕಾರಿಗಳಿಗೆ ಸೂಚಿಸಿ ಅವರ ವಿಜಿಟ್ ಡೈರಿ ಪರಿಶೀಲಿಸಿದರು.

ಇಲ್ಲಿ ರೈತ ಭವನ ಇಲ್ಲ, ಹಮಾಲಿ ಕುಟುಂಬಗಳು ಇರುವ ಸ್ಥಳಕ್ಕೆ ಬಸ್ಸಿನ ಸೌಕರ್ಯ ಇಲ್ಲ ಎಂದು ಹಮಾಲಿ ಕುಟುಂಬದ ಮಹಿಳೆಯರು ಇದೆ ವೇಳೆ ಉಪ ಲೋಕಾಯುಕ್ತರ ಎದುರು ತಮ್ಮ ಅಳಲು ತೋಡಿಕೊಂಡರು. ರೈತ ಭವನ ನಿರ್ಮಾಣಕ್ಕೆ ಮತ್ತು ರಸ್ತೆ ದುರಸ್ತಿಗೆ ಕ್ರಿಯಾಯೋಜನೆಯಲ್ಲಿ ಅನುದಾನ ಮೀಸಲಿಟ್ಟು ಕಾರ್ಯಕೈಗೊಳ್ಳುವುದಾಗಿ ಎಪಿಎಂಸಿ ಅಧಿಕಾರಿಗಳು ಲೋಕಾಯುಕ್ತರಿಗೆ ಉತ್ತರಿಸಿದರು.

ಬಳಿಕ ಉಪ ಲೋಕಾಯುಕ್ತರು, ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಟೈಮಾಕ್ಸ್ ಮತ್ತು ಹತ್ತಿರದ ವಿವಿಧ ಕಾರ್ಖಾನೆಗಳ ಬಳಿಯಲ್ಲಿ ಹರಿಯುತ್ತಿದ್ದ ಕೆಮಿಕಲ್ ಮಿಶ್ರಿತ ಕುಲುಷಿತ ನೀರು ವೀಕ್ಷಣೆ ಮಾಡಿದರು. ಇಲ್ಲಿಗೆ ತಾವು ನಿಯಮಿತ ಭೇಟಿ ನೀಡಿ ಈ ಕಲುಷಿತ ನೀರು ಎಲ್ಲಿಗೆ ಹರಿಯುತ್ತದೆ ಎಂದು ನೋಡಿದ್ದೀರಾ? ಕೆಮಿಕಲ್ ಮಿಶ್ರಿತ ಕಲುಷಿತ ನೀರು ಹರಿಸುವ ಖಾರ್ಕಾನೆಗಳಿಗೆ ನೊಟೀಸ್ ಕೊಟ್ಟಿದ್ದೀರಾ? ಎಂದು ಪರಿಸರ ಅಧಿಕಾರಿಗಳಿಗೆ ಇದೆ ವೇಳೆ ಉಪ ಲೋಕಾಯುಕ್ತರು ಪ್ರಶ್ನಿಸಿದರು. ಪರಿಸರ ಅಧಿಕಾರಿಯು ನಿರ್ಲಕ್ಷ್ಯ ವಹಿಸಿದಾಗ ಹೀಗೆ ಕೆಮಿಕಲ್ ಮಿಶ್ರಿತ ವಿಷಯುಕ್ತನೀರು ನದಿಗೆ ಹರಿದು ಜನ-ಜೀವಜಂತು ಸಾಯುವಂತಾಗುತ್ತದೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಇದು ಯಾವ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ?. ಪಿಡಿಓ ಎಲ್ಲಿದ್ದಾರೆ? ತಾಪಂ ಇಓ ಏನು ಮಾಡ್ತಾರೆ ? ಎಂದು ಕೇಳಿ ಯದ್ಲಾಪುರ ಗ್ರಾಪಂ ಪಿಡಿಓ ಮತ್ತು ಇಓ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಿದರು.

ಕೆಮಿಕಲ್ ನೀರು ಹೊರಬಿಡುವ ಕಾರ್ಖಾನೆಗಳಿಗೆ ನೊಟೀಸ್ ನೀಡಿ, ಮುಚ್ಚಲು ಕ್ರಮವಹಿಸಬೇಕು ಎಂದು ಪರಿಸರ ಅಧಿಕಾರಿಗಳಿಗೆ ಇದೆ ವೇಳೆ ಲೋಕಾಯುಕ್ತರು ಸೂಚನೆ ನೀಡಿದರು.

ಬಳಿಕ ಉಪ ಲೋಕಾಯುಕ್ತರು, ಮಂಚಿಕೊಂಡ ಆಗ್ರೋ ಫುಡ್ ಕಾರ್ಖಾನೆಯಿಂದ ಹರಿಯುತ್ತಿದ್ದ ಕಲುಷಿತ ನೀರು ನೋಡಿದರು.

ಈ ಕಾರ್ಖಾನೆಗಳಿಂದ ಹೊರಬರುವ ಕಲುಷಿತ ನೀರಿನಿಂದ ಭತ್ತದ ಬೆಳೆಗೆ ಹಾನಿಯಾಗುತ್ತಿದೆ. ಜನತೆಗೆ ಚರ್ಮ ರೋಗ ಭಾದೆ ಕಾಡುತ್ತಿದೆ ಎಂದು ಸಾರ್ವಜನಿಕರು ದೂರಿದರು. ಸುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿ ಚರ್ಮರೋಗ ಬಗ್ಗೆ ಮತ್ತು ಭತ್ತದ ಬೆಳೆಯ ಬಗ್ಗೆ ಪರಿಶೀಲಿಸಿ ಸಂಜೆಯೊಳಗೆ ವರದಿ ನೀಡಬೇಕು ಎಂದು ಚಿಕ್ಕಸಗೂರು ಪಿಡಿಓ ಅವರಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.

ಅಲ್ಲಿಂದ ಬೆಳಗಿನ 10 ಗಂಟೆ ವೇಳೆಗೆ ಲೋಕಾಯುಕ್ತರು ಕೇಂದ್ರ ಬಸ್ ನಿಲ್ದಾಣ ಪ್ರವೇಶ ಮಾಡಿದರು. ಬಸ್ ನಿಲ್ದಾಣದ ಕ್ಯಾಂಟೀನ್ ಒಳಗಿನ ಅಡುಗೆ ಕೋಣೆಗೆ ತೆರಳಿ ತರಕಾರಿ, ದವಸ ಧಾನ್ಯಗಳ ಗುಣಮಟ್ಟ ಪರೀಕ್ಷಿಸಿದರು. ಪ್ರಯಾಣಿಕರಿಗೆ ಅನುಕೂಲವಾಗಲು ಶೌಚಾಲಯಗಳ ಬಳಿ ಕ್ಯೂಆರ್ ಕೋಡ್ ಹಾಕಿ ಅನುಕೂಲ ಕಲ್ಪಿಸಲು ಏಜೇನ್ಸಿಗಳಿಗೆ ಸೂಚನೆ ನೀಡಿದರು. ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ಬಸ್ ಶೆಲ್ಟರ್ ಅಳವಡಿಸಲು, ಆವರಣದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಇದೆ ವೇಳೆ ಉಪ ಲೋಕಾಯುಕ್ತರು ಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.

ಎಪಿಎಂಸಿಯ ಹಮಾಲರ ಕಾಲೋನಿಗೆ ಬಸ್ ಹಾಕಲು ಸಂಜೆಯೊಳಗೆ ಆದೇಶ ಮಾಡುವುದಾಗಿ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯು ಲೋಕಾಯುಕ್ತರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಹೆಚ್.ಎ.ಸಾತ್ವಿಕ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರಾದ ಸತೀಶ್ ಬಿ.ಚಿಟುಗುಬ್ಬಿ, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ, ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕುಮಾರಸ್ವಾಮಿ, ಕರ್ನಾಟಕ ಲೋಕಾಯುಕ್ತದ ಡಿಎಸ್ಪಿಗಳಾದ ರವಿ ಪುರμÉೂೀತ್ತಮ, ವಸಂತಕುಮಾರ, ಪೆÇಲೀಸ್ ನಿರೀಕ್ಷಕರಾದ ಕಾಳಪ್ಪ ಬಡಿಗೇರ, ಚಂದ್ರಪ್ಪ, ಸುನಿಲ್ ಮೇಗಲಮನಿ, ಶೈಲಜಾ, ನಾಗರತ್ನ ಹಾಗೂ ಲೋಕಾಯುಕ್ತ ಕಚೇರಿಯ ಇಙ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ಲೋಕಸಭೆ ಚುನಾವಣೆ 2024: ಇಂದು ವರಿಷ್ಠರ ಜತೆ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಸಭೆ
ಹಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ
ಕೊಡಗಿನಲ್ಲಿ ತಂಪೆರೆದ ಮಳೆ, ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ
ದೃಶ್ಯಕಲೆಯಲ್ಲಿ ಬಿ.ವಿ.ಎ. ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ನಾಳೆ ಜಿಲ್ಲಾಡಳಿತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ನಾಳೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕ ಪ್ರವಾಸ
Next Article ಬಲೂಚಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?