ಉಡುಪಿ, 18ಜನವರಿ(ಹಿ.ಸ):
ಆ್ಯಂಕರ್ :
ಉಡುಪಿಯಲ್ಲಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಶ್ರೀಕೃಷ್ಣನ ಪರ್ಯಾಯ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದೆ.ಪುತ್ತಿಗೆ ಮಠದ ಶ್ರೀಗಳ ಪರ್ಯಾಯ ಮೆರವಣಿಗೆಯಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಶಿಷ್ಯರಾದ ಸುಶೀಂದ್ರ ತೀರ್ಥರು ಭಾಗಿಯಾಗಿದ್ದಾರೆ.ಉಡುಪಿಯ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಆರಂಭವಾಗಿ ರಥ ಬೀದಿಯವರೆಗೂ ಸಾಗಿತು.ಮೆರವಣಿಗೆಯ ಕೊನೆಯಲ್ಲಿ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಸುಶ್ರೀಂದ್ರ ತೀರ್ಥರು ವಾಹನ ಪಲ್ಲಕ್ಕಿ ಏರಿ ಬಂದರು.
ಹಿಂದೂಸ್ತಾನ್ ಸಮಾಚಾರ್
