ವಿಜಯಪುರ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಧಿಕಾರ ಇರಲಿ ಬಿಡಲಿ ಸಾಮಾಜಿಕ ಸೇವೆ ಮಾಡುವ ಮೂಲಕ ಬಡವರ ಕಣ್ಣೀರು ಒರೆಸುವುದು ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನವನಗರದ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ/ವಿವಿಕೆ ಫೌಂಡೇಶನ್ ಹಾಗೂ ಎಸ್ ಡಿಎಮ್ ನಾರಾಯಣ ಹಾಟ್೯ ಸೆಂಟರ್ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ನನಗೆ ಅಧಿಕಾರ ಸಿಗಲಿಲ್ಲವಾದರೂ ಚಿಂತನೆ ಇಲ್ಲ, ಸತತ ಪ್ರಯತ್ನ ದಿಂದ ಗೆಲವು ಸಿಗಲಿದೆ. ಜನರ ಮನಸ್ಸನಲ್ಲಿ ಯಾರೂ ಎಂ ಪಿ ಆಗಿದ್ದೇನೆ ಅಷ್ಟೇ ಸಾಕು ಎಂದ ವೀಣಾ ಕಾಶಪ್ಪನವರ ಇತ್ತೀಚಿಗೆ ಹೃದಯರೋಗ ಸಂಭಂದ ಕಾಯಿಲೆಗಳು ಹೆಚ್ಚಾಗುತ್ತಿದೆ.ಈ ಹಿನ್ನಲೆ ತಪಾಸಣೆ ಮಾಡಿಸಿಕೊಳ್ಳಿ.ಚಿಕ್ಕ ಪುಟ್ಟ ಇದ್ದಾಗಲೇ ಎಚ್ಚರಿಕೆ ತೆಗೆದುಕೊಂಡು ಚಿಕಿತ್ಸೆ ಪಡೆಯುವುದು ಅಗತ್ಯವಿದೆ ಎಂದರು.
ಸಮಾರಂಭ ದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಶಿಧರ ಕುರೇರ್ ಭಾಗವಹಿಸಿ,ಹೃದಯ ರೋಗ ಲಕ್ಷಣ ಬಂದಾಗ ತಕ್ಷಣವೇ ಚಿಕಿತ್ಸೆ ಪಡೆಯಬೇಕಾಗಿದೆ.ವಯಸ್ಸು ಆದ ಬಳಿಕ ಹೃದಯ ರೋಗ ತಪಾಸಣಾ ಮಾಡಿ ಕೊಳ್ಳುವುದು ಅಗತ್ಯವಿದೆ.ಈ ನಿಟ್ಟಿನಲ್ಲಿ ವಿವಿಕೆ ಫೌಂಡೇಶನ್ ವತಿಯಿಂದ ಇಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭ ದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್. ಜಿ. ನಂಜಯ್ಯನಮಠ,ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಭೋವಿ ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ,ಸಿದ್ದನಕೊಳ್ಳದ ಮಠದ ಡಾ.ಶಿವಕುಮಾರ ಸ್ವಾಮಿಜಿ ಸೇರಿದಂತೆ ಇತರ ಪ್ರಮುಖ ಸ್ವಾಮೀಜಿಗಳು ಉಪಸ್ಥಿತರಿದ್ದರು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಮುಖ ವೈಧ್ಯರಿಂದ ರೋಗಿಗಳಿಗೆ ವೈಧ್ಯರಿಂದ ಹೃದಯ ರೋಗ ತಪಾಸಣಾ ನಡೆಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande
