
ಬೆಂಗಳೂರು,17 ಅಕ್ಟೋಬರ್ (ಹಿ.ಸ):
ಆ್ಯಂಕರ್ :ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಐಟಿ ದಾಳಿ ನಡೆದಿದೆ. ಮೊನ್ನೇ ಅಷ್ಟೇ ದಾಳಿ ಮಾಡಿದ್ದ ಐಟಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಇಡಿ ದಾಳಿಯಾಗಿದೆ . ಬೆಂಗಳೂರಿನ ಉದ್ಯಮಿಯೋರ್ವ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎರಡು ಕಂಪನಿಗಳ ಎಂಡಿ ಮತ್ತು ಡೈರೆಕ್ಟರ್ ಆಗಿರುವ ಉದ್ಯಮಿಯ ಕಸವಿನಹಳ್ಳಿ ಬಳಿ ಇರುವ ನಿವಾಸದ ಮೇಲೆ ದಾಳಿಯಾಗಿದೆ.
ಉದ್ಯಮಿ ಉಷಾ ರಾಮನಾನಿ ಮನೆ ಹಾಗೂ ಕಂಪನಿಗಳ ಕಚೇರಿಗಳ ಮೇಲೆ ದಾಳಿಯಾಗಿದೆ. ಇವರು ಹಲವು ಖಾಸಗಿ ಕಂಪನಿಗಳನ್ನು ಹೊಂದಿರುವ ಬ್ಗಗೆ ಮಾಹಿತಿ ತಿಳಿದುಬಂದಿದೆ. ಒಟ್ಟು 8 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್ 17) ಬೆಳಗ್ಗೆ 5 ಗಂಟೆಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
