ಚಿಕ್ಕಮಗಳೂರು, 11 ಜನವರಿ(ಹಿ.ಸ):
ಆ್ಯಂಕರ್ :: ಇಂಗ್ಲೆಂಡ್ ನಿಂದ ಸೈಕಲ್ ನಲ್ಲೇ 25 ದೇಶಗಳನ್ನು ಸುತ್ತಿ ಇದೀಗ ಭಾರತಕ್ಕೆ ಬಂದಿರುವ ಪ್ರವಾಸಿಗ ಹೆರಾಲ್ಡ್ ಎಂಬವರಿಗೆ ಮಲೆನಾಡಿಗರು ಅಯೋಧ್ಯೆ ರಾಮಂದಿರದ ಮಂತ್ರಾಕ್ಷತೆಯನ್ನು ನೀಡಿದ್ದಾರೆ.
ಕೈಯಲ್ಲಿ ಓಂ ಎಂದು ಹಚ್ಚೆ ಹಾಕಿಸಿಕೊಂಡಿರುವ ಹೆರಾಲ್ಡ್, ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹಾಗೂ ಅಭಿಮಾನ ಹೊಂದಿದ್ದಾರೆ. ಅವರಿಗೆ ಗ್ರಾಮದ ವಾಸೇಗೌಡ ಹಾಗೂ ಸಂಪತ್ ಎಂಬವರು ಮಂತ್ರಾಕ್ಷತೆ ನೀಡಿದ್ದಾರೆ. ಬಳಿಕ ಹಿಂದೂ ಧರ್ಮ, ಭಗವದ್ಗೀತೆ, ಅಯೋಧ್ಯೆ ಹಾಗೂ ಶ್ರೀರಾಮನ ಬಗ್ಗೆ ಹೆರಾಲ್ಡ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೆರಾಲ್ಡ್ಗೆ ಆತಿಥ್ಯ ನೀಡಿದ್ದಾರೆ.ಮಂತ್ರಾಕ್ಷತೆಯನ್ನು ಪಡೆದ ಹೆರಾಲ್ಡ್, ಅದನ್ನು ಗೌರವದಿಂದ ಇಂಗ್ಲೆಂಡ್ಗೆ ಕೊಂಡೊಯ್ಯುತ್ತೇನೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
