ಹಾವೇರಿ, 30 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ತಾಲೂಕು ವಲಯ ಅರಣ್ಯ ಅಧಿಕಾರಿ ಮಹಾಂತೇಶ ನ್ಯಾಮತಿ ಹಾಗೂ ಜಲಾನಯನ ಅಭಿವೃದ್ಧಿ ಅಧಿಕಾರಿ ಪರಮೇಶ ಪೇಲನವರ ಅವರ ಕಚೇರಿ ಹಾಗೂ ನಿವಾಸಿ ಸೇರಿ ಒಟ್ಟು 10 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಪರಮೇಶ ಪೇಲನವರಗೆ ಸೇರಿದ ಜಿಲ್ಲೆಯ 6 ಕಡೆಗಳಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ತಪಾಸಣೆ ನಡೆಸಿದ್ದಾರೆ. ಮಹಾಂತೇಶ ನ್ಯಾಮತಿಗೆ ಸೇರಿದ ಜಿಲ್ಲೆಯ ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿಗಳ ದಾಖಲೆ ಪತ್ರಗಳು ಹಾಗೂ ವಿದೇಶಿ ಮದ್ಯ ಪತ್ತೆಯಾಗಿದೆ. ಎಲ್ಲವನ್ನೂ ವಶಕ್ಕೆ ಪಡೆದಿರುವ ಲೊಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದು, ಪರಿಶೀಲನೆ ಬಳಿಕ ನಿರ್ದಿಷ್ಟ ಅಂಕ-ಸಂಖ್ಯೆ ತಿಳಿಯಲಿದೆ.
ಹಿಂದೂಸ್ತಾನ್ ಸಮಾಚಾರ್ ಮಂಜುನಾಥ ಗುಡಿಸಾಗರ/ ಪಿವಿ
