ನವದೆಹಲಿ,15ನವೆಂಬರ್ (ಹಿ.ಸ):
ಆ್ಯಂಕರ್ :
ವಿಕಸಿತ ಭಾರತ ಸಂಕಲ್ಪ ಯಾತ್ರೆ ಜನರನ್ನು ತಲುಪಲು ಸರ್ಕಾರ ಹಮ್ಮಿಕೊಂಡಿರುವ ಅತಿದೊಡ್ಡ ಉಪಕ್ರಮವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಹೇಳಿದ್ದಾರೆ. ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ದೇಶದ ಯಾರೊಬ್ಬರು ಅಭಿವೃದ್ಧಿಯಿಂದ ಹಿಂದುಳಿಯಬಾರದು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಾಗಿದೆ. ಈ ಗುರಿಯನ್ನು ತಲುಪಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ನೆರವಾಗಲಿದೆ ಎಂದು ಕಾರ್ಯದರ್ಶಿ ಹೇಳಿದ್ದಾರೆ. ದೇಶದ ದೂರ ದೂರದ ಬೆಟ್ಟಗುಡ್ಡ ಪ್ರದೇಶಗಳಲ್ಲಿರುವ ಬುಡಕಟ್ಟು ಜನರಿಗೆ ಅಭಿವೃದ್ಧಿ ಯೋಜನೆಯ ಮಾಹಿತಿಯನ್ನು ತಲುಪಿಸುವ ಬಗ್ಗೆ ಮಾತನಾಡಿದ ಅವರು, ಯಾತ್ರೆಯ ಆರಂಭಿಕ ಹಂತದಲ್ಲಿ ಬುಡಕಟ್ಟು ಜನರು, ರೈತರು, ಮಹಿಳೆಯರು ಹಾಗೂ ಯುವಕರನ್ನು ತಲುಪಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
