ತಿರುವಂತಪುರಂ, 27 ಫೆಬ್ರವರಿ:
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕೇರಳದ ತಿರುವಂತಪುರಂಗೆ ಭೇಟಿ ನೀಡಲಿದ್ದಾರೆ. ತಿರುವನಂತಪುರಂನಲ್ಲಿ ಅವರು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ೧ ಸಾವಿರದ ೮೦೦ ಕೋಟಿ ರೂಪಾಯಿ ಮೊತ್ತದ ಮೂರು ಬಾಹ್ಯಾಕಾಶ ಕ್ಷೇತ್ರದ ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.
ಶ್ರೀಹರಿಕೋಟಾದ ಪಿ.ಎಸ್.ಎಲ್.ವಿ ಸಮಗ್ರ ಸೌಲಭ್ಯ, ಸೆಮಿ ಕ್ರಯೋಜೆನಿಕ್ಸ್ ಇಂಟಗ್ರೇಟೆಡ್ ಇಂಜಿನ್, ಮಹೇಂದ್ರಗಿರಿಯಲ್ಲಿ ಇಸ್ರೋ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಸೌಲಭ್ಯ ಕಲ್ಲಿಸುವ ಯೋಜನೆಗಳು ಇವಾಗಿವೆ. ಇದರಿಂದ ಬಾಹ್ಯಾಕಾಶ ಕೇಂದ್ರಕ್ಕೆ ವಿಶ್ವದರ್ಜೆಯ ಮೂಲ ಸೌಕರ್ಯ ಕಲ್ಪಿಸಿದಂತಾಗಲಿದೆ. ಪ್ರಧಾನಮಂತ್ರಿಯವರು ಗಗನಯಾನ ಅಭಿಯಾನ ಕುರಿತಂತೆಯೂ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ನಂತರ ಪ್ರಧಾನ ಮಂತ್ರಿಯವರು ಕೇರಳ ರಾಜ್ಯದ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಪಾದಯಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಪಕ್ಷದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
