
ಜೈಪುರ್,9 ನವೆಂಬರ್ (ಹಿ.ಸ):
ಆ್ಯಂಕರ್ :ರಾಜಸ್ತಾನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರಗಳನ್ನು ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ. ಈ ತಿಂಗಳ ೨೫ ರಂದು ಅಲ್ಲಿ ೨೦೦ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ನಾಮಪತ್ರಗಳ ಪರಿಶೀಲನೆ ಮೊನ್ನೆ ನಡೆಯಿತು.
ತೆಲಂಗಾಣದಲ್ಲಿ ಶುಕ್ರವಾರದವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನಾಮಪತ್ರ ಪರಿಶೀಲನೆ ೧೩ನೇ ತಾರೀಖಿನಂದು ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು ಈ ತಿಂಗಳ ೧೫ ಕೊನೆಯ ದಿನವಾಗಿರುತ್ತದೆ, ಈ ತಿಂಗಳ ೩೦ ರಂದು ೧೧೯ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ವಿಧಾನಸಭಾ ಚುನಾವಣೆ ನಡೆಯುತ್ತಿರುವ ಮಿಜೋರಾಂ, ಛತ್ತೀಸ್ಗಢ್, ಮಧ್ಯಪ್ರದೇಶ, ರಾಜಸ್ತಾನ ಹಾಗೂ ತೆಲಂಗಾಣಗಳಲ್ಲಿ ಡಿಸೆಂಬರ್ ೩ ರಂದು ಮತ ಎಣಿಕೆ ನಡೆಯುವುದು.
ಹಿಂದೂಸ್ತಾನ್ ಸಮಾಚಾರ್
