ಟೊಕಿಯೊ,9 ನವೆಂಬರ್ (ಹಿ.ಸ):
ಆ್ಯಂಕರ್ :ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಮುರುಳೀಧರನ್, ಮೂರು ದಿನಗಳ ಕಾಲ ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಅವರು, ನಿನ್ನೆ ಟೊಕಿಯೊ ಗೆ ಆಗಮಿಸಿದರು. ಅವರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾರತ ಮತ್ತು ಜಪಾನ್ ನಡುವೆ ಪ್ರಾಚೀನ ಐತಿಹಾಸಿಕ ಸಂಬಂಧ ಹಾಗೂ ಸಮಾನ ಮೌಲ್ಯಗಳು ಇದ್ದು, ಎರಡು ದೇಶಗಳು ವಿಶೇಷ ಕಾರ್ಯತಾಂತ್ರಿಕ ಹಾಗೂ ಜಾಗತಿಕ ಪಾಲುದಾರಿಕೆಯನ್ನು ಹೊಂದಿವೆ ಎಂದರು.
ಜಪಾನ್ ಪ್ರವಾಸ ಸಂದರ್ಭದಲ್ಲಿ ಅವರು, ಹಲವು ಸಚಿವರು, ವಾಣಿಜ್ಯೋದ್ಯಮಗಳು ಹಾಗೂ ಅನಿವಾಸಿ ಭಾರತೀಯರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ. ಅಲ್ಲದೇ ಅವರು, ಹಿರೋಷಿಮಾದ ಕ್ವೈಟೊ ಮತ್ತು ಟೊಕಿಯೊ ಗೆ ಭೇಟಿ ನೀಡಲಿದ್ದಾರೆ. ’ಭಾರತ ಮತ್ತು ಉದಯಿಸುತ್ತ್ತಿರುವ ವಿಶ್ವ’ ಎಂಬ ವಿಷಯ ಕುರಿತು ಅವರು ಉಪನ್ಯಾಸವನ್ನು ನೀಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
