ದೆಹಲಿ, 19 ಡಿಸೆಂಬರ್(ಹಿ.ಸ):
ಆ್ಯಂಕರ್ :
ಲೋಕಸಮರದಲ್ಲಿ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸುತ್ತಿರುವ ಇಂಡಿಯಾ ಒಕ್ಕೂಟದ ನಾಲ್ಕನೇ ಸಭೆ ದೆಹಲಿಯ ಅಶೋಕ ಹೋಟೆಲಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಪ್ರತಿ ರಾಜ್ಯದಲ್ಲಿ ಸೀಟ್ ಹೊಂದಾಣಿಕೆ ಮತ್ತು ಪ್ರಧಾನಿ ಅಭ್ಯರ್ಥಿ ಕುರಿತಾಗಿ ಚರ್ಚೆ ನಡೆಯಲಿದೆ.
ನಮ್ಮ ಒಳಗೆ ಸ್ಪರ್ಧೆ ನಡೆದರೆ ಬಿಜೆಪಿಗೆ ಲಾಭ ಎಂಬುದನ್ನು ಅರಿತ ವಿಪಕ್ಷಗಳು ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿ ವಿರುದ್ಧ ಮತಗಳ ಕ್ರೋಢಿಕರಣಕ್ಕೆ ತಂತ್ರ ರೂಪಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
