ನವದೆಹಲಿ, 4 ಡಿಸೆಂಬರ್(ಹಿ.ಸ):
ಆ್ಯಂಕರ್ :
ರಾಷ್ಟ್ರ ರಾಜಧಾನಿಯಲ್ಲಿರುವ ಸಂಸತ್ ಭವನದಲ್ಲಿ ಸೋಮವಾರದಿಂದ (ಡಿ.4) ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಕೇಂದ್ರ ಸಚಿವರು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.
ನರೇಂದ್ರ ಮೋದಿ ಅವರು ಸಂಸತ್ ಭವನ ಪ್ರವೇಶಿಸುತ್ತಿದ್ದಂತೆ ಕೇಂದ್ರ ಸಚಿವರು ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
4 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಜನರು ನಕಾರಾತ್ಮಕತೆಯನ್ನ (ನೆಗೆಟಿವಿಟಿ) ತಿರಸ್ಕರಿಸಿದ್ದಾರೆ ಅನ್ನೋದು ತೋರಿಸುತ್ತೆ. ಈ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.
ಮುಂದುವರಿದು, ಎಲ್ಲ ಸಂಸದರು ಪೂರ್ವಸಿದ್ಧತೆಯೊಂದಿಗೆ ಸಂಸತ್ತಿಗೆ ಬರಬೇಕೆಂದು ನಾನು ವಿನಂತಿಸುತ್ತೇನೆ. ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ನಾನು ಪ್ರತಿಪಕ್ಷಗಳಿಗೆ ಇದೊಂದು ಸುವರ್ಣಾವಕಾಶವೆಂದೇ ಹೇಳುತ್ತೇನೆ. ಕಳೆದ 9 ವರ್ಷಗಳಿಂದ ಹೊಂದಿರುವ ನಕಾರಾತ್ಮಕತೆಯನ್ನು ಈಗಲಾದರೂ ತೊಡೆದುಹಾಕಬೇಕು. ಸಕಾರಾತ್ಮಕತೆಯಿಂದ ಮುಂದುವರಿಯಬೇಕು, ಹಾಗಾಗಿ ದಯವಿಟ್ಟು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
