ನವದೆಹಲಿ,
ಆ್ಯಂಕರ್ :ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳಿಗೆ ಇದೇ ೧೯ ರಂದು ಮತದಾನ ಒಟ್ಟಿಗೆ ನಡೆಯುತ್ತಿದ್ದು, ಎಲ್ಲ ಜಿಲ್ಲೆಗಳಲ್ಲೂ ಮತದಾನಕ್ಕೆ ಅವಕಾಶ ಕಲ್ಪಿಸುವ ವಿವಿಎಂ ಮತ್ತು ವಿವಿಪ್ಯಾಟ್ಸ್ಗಳ ಯಂತ್ರಸ್ಥಾಪನೆ ಕಾರ್ಯ ಬರದಿಂದ ಸಾಗಿದೆ. ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಇಂಡಿಯಾದ ಸುಮಾರು ೧೮೦ ಇಂಜಿನಿಯರ್ಗಳು ರಾಜ್ಯಕ್ಕೆ ಆಗಮಿಸಿದ್ದು, ೨೫ ಜಿಲ್ಲೆಗಳಲ್ಲಿ ಯಂತ್ರಸ್ಥಾಪನೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಆಯೋಗ ನೇಮಿಸಿರುವ ವೀಕ್ಷಕರು ಚುನಾವಣಾ ಸಿದ್ಧತೆಗಳ ಮೇಲುಸ್ತುವಾರಿ ವಹಿಸಿದ್ದಾರೆ. ಸುವ್ಯವಸ್ಥೆ ಕಾರ್ಯನಿರ್ವಹಿಸುವ ಸಂಸ್ಥೆಗಳು ಲೋಹಪತ್ತೆ, ತಪಾಸಣೆ ಮೊದಲಾದ ಕಾರ್ಯದಲ್ಲಿ ತೊಡಗಿದೆ. ನಿರ್ವಾಚನಾಧಿಕಾರಿಗಳು ಹಾಗೂ ಆಯಾ ಮತಕ್ಷೇತ್ರಗಳಿಗೆ ಸಂಬಂಧಿಸಿದ ಚುನಾವಣಾ ಸಿಬ್ಬಂದಿ ಯಂತ್ರ ಸ್ಥಾಪನೆ ಮೇಲೆ ನಿಗಾವಹಿಸಿದ್ದಾರೆ. ಇವಿಎಂ ಸ್ಥಾಪನೆ ಮೂಲಕ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಮತಪತ್ರ ಘಟಕಕ್ಕೆ ಸೇರ್ಪಡೆಯಾಗುತ್ತದೆ. ವಿವಿಪ್ಯಾಟ್ ಯಂತ್ರದಲ್ಲಿ ಚಿಹ್ನೆ ಅಪ್ಲೋಡ್ ಆಗಿ ನಿಯಂತ್ರಣಾ ಘಟಕದಲ್ಲಿ ಅಭ್ಯರ್ಥಿ ಹೆಸರಿನ ಜೊತೆ ಹೊಂದಾಣಿಕೆಯಾಗಿರುತ್ತದೆ. ಈ ಎಲ್ಲ ಕಾರ್ಯಗಳನ್ನು ಅಭ್ಯರ್ಥಿಗಳ ಅಥವಾ ಅವರ ಚುನಾವಣಾ ಏಜೆಂಟ್ಗಳ ಅಥವಾ ಅಧಿಕೃತ ಪ್ರತಿನಿಧಿಗಳ ಸಮ್ಮುಖದಲ್ಲಿ ನಡಸಲಾಗುತ್ತಿದೆ
