ನವದೆಹಲಿ,
ಅಲ್ಲಿನ ಗಾಜಿಯಾಬಾದ್ ಬಳಿಯ ಮೀರತ್ ಎಕ್ಸ್ ಪ್ರೆಸ್ ವೇಯಲ್ಲಿ ಟ್ರಕ್ಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ ಸೇರಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಈ ಭೀಕರ ರಸ್ತೆ ಅಪಘಾತದ ದೃಶ್ಯ ಎಲ್ಲೆಡೆ ವೈರಲ್ ಆಗ್ತಿದೆ.
ಎಕ್ಸ್ಪ್ರೆಸ್ ವೇಯಲ್ಲಿ ಸಾಗುತ್ತಿದ್ದ ಕಾರು, ಟ್ರಕ್ಗೆ ಡಿಕ್ಕಿಯಾಗಿದೆ, ಬಳಿಕ ಒಂದೆರಡು ಬಾರಿ ತಿರುಗಿ ಮತ್ತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇನ್ನೊಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಇದ್ರಿಂದಾಗಿ ಕಾರು ಜಖಂಗೊಂಡಿದ್ದು, ಚಾಲಕ ಸೇರಿ ಪರೀಕ್ಷೆ ಬರೆಯಲು ಹೊರಟಿದ್ದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಏರ್ಟಿಗಾ ಕಾರು 11 ಮಕ್ಕಳನ್ನು ಆಮ್ರೋದಾದಿಂದ ಹೊತ್ತೊಯ್ಯುತ್ತಾ ಸಾಗಿತ್ತು. ಈ ವೇಳೆ ಡಂಪರ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 11 ಮಕ್ಕಳು ಮತ್ತು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ 2 ಮಕ್ಕಳು ಮ್ತು ಚಾಲಕ ಸಾವನ್ನಪ್ಪಿದ್ದಾನೆ.
