
ದೆಹಲಿ, 27 ಜನವರಿ:
ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಇಂದು ಸಂಜೆ ನಡೆಯಲಿರುವ ವಾರ್ಷಿಕ ಎನ್.ಸಿ.ಸಿ. ಪ್ರಧಾನಮಂತ್ರಿ ಪಥಸಂಚಲನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಮಾರಂಭವು ‘ಅಮೃತ್ ಕಾಲ್ ಕಿ ಎನ್ಸಿಸಿ’ ವಿಷಯದ ಮೇಲೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ಇದು ಅಮೃತ್ ಕಾಲದ ಕೊಡುಗೆ ಮತ್ತು ಸಬಲೀಕರಣದ ಪರಿಕಲ್ಪನೆಯನ್ನು ಪ್ರದರ್ಶಿಸಲಿದೆ. ವಸುಧೈವ ಕುಟುಂಬಕಮ್ ತತ್ವದ ನಿಜವಾದ ಭಾರತೀಯ ಸ್ಫೂರ್ತಿಯಲ್ಲಿ, ೨೪ ವಿದೇಶಗಳ ಯುವ ಕೆಡೆಟ್ಗಳು ಸೇರಿದಂತೆ ೨,೨೦೦ಕ್ಕೂ ಹೆಚ್ಚು ಎನ್.ಸಿ.ಸಿ. ಕೆಡೆಟ್ಗಳು ಈ ವರ್ಷದ ಪಥಸಂಚಲದಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ, ದೇಶದ ವಿವಿಧ ಭಾಗಗಳಿಂದ ವೈವಿಧ್ಯಮಯ ಗ್ರಾಮಗಳ ೪೦೦ಕ್ಕೂ ಹೆಚ್ಚು ಸರಪಂಚರು ಮತ್ತು ವಿವಿಧ ಸ್ವ-ಸಹಾಯ ಗುಂಪುಗಳಿಗೆ ಸೇರಿದ ೧೦೦ಕ್ಕೂ ಹೆಚ್ಚು ಮಹಿಳೆಯರು ಎನ್.ಸಿ.ಸಿ ಪ್ರಧಾನಮಂತ್ರಿ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.
