ಪ್ರಧಾನಿ ನರೇಂದ್ರ ಮೋದಿ ಕಳೆದ 2 ತಿಂಗಳಿನಿಂದ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ದೇಶದ ಉದ್ದಗಲಕ್ಕೂ ನಿರಂತರ ಪ್ರವಾಸ ಮಾಡುತ್ತಿದ್ದರು. ಈಗ ಅವರು ಧ್ಯಾನ ಮಾಡುವ ಉದ್ದೇಶದಿಂದ ಮೂರು ದಿನಗಳ ಕಾಲ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕಕ್ಕೆ ತೆರಳುತ್ತಿದ್ದಾರೆ.
BulletsIn
- ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ದಿನಗಳ ಧ್ಯಾನಕ್ಕೆ ತೆರಳುತ್ತಿದ್ದಾರೆ.
- ಅವರು ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ.
- ಮೂರು ದಿನಗಳಲ್ಲಿ ಮೋದಿ ಸುಮಾರು 45 ಗಂಟೆಗಳ ಕಾಲ ಶಿಲಾ ಸ್ಮಾರಕದಲ್ಲಿ ತಂಗಲಿದ್ದಾರೆ.
- ಧ್ಯಾನಕ್ಕೆ ಮತ್ತು ವಾಸ್ತವ್ಯಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.
- ಭದ್ರತೆಗಾಗಿ 2000 ಪೊಲೀಸರನ್ನು ನಿಯೋಜಿಸಲಾಗಿದೆ.
- ಜೂ. 1ರ ಕೊನೆಯ ಹಂತದ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬೀಳಲಿದೆ.
- ಗುರುವಾರ ಸಂಜೆ 5 ಗಂಟೆಗೆ ಮೋದಿ ಕನ್ಯಾಕುಮಾರಿಗೆ ಆಗಮಿಸುತ್ತಾರೆ.
- ಜೂ. 1ರಂದು ಮಧ್ಯಾಹ್ನ 3 ಗಂಟೆಗೆ ಅವರು ಧ್ಯಾನ ಮುಗಿಸಿ ತೆರಳಲಿದ್ದಾರೆ.
- ಮೋದಿಯ ಭೇಟಿ ಸಂದರ್ಭದ ಭದ್ರತೆಗಾಗಿ ಶೀಲಾ ಸ್ಮಾರಕದ ಸುತ್ತಮುತ್ತ ಖಾಸಗಿ ಬೋಟ್ಗಳ ಸಂಚಾರ ನಿಷೇಧಿಸಲಾಗಿದೆ.
- 2019ರ ಚುನಾವಣಾ ಪ್ರಚಾರದ ನಂತರ ಮೋದಿಯವರು ಕೇದಾರನಾಥ ಗುಹೆಯಲ್ಲಿ ಇದೇ ರೀತಿಯ ಧ್ಯಾನ ನಡೆಸಿದ್ದರು.
