ಪಣಜಿ, 6 ಫೆಬ್ರವರಿ :
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗೋವಾದಲ್ಲಿ ಭಾರತ ಇಂಧನ ಸಪ್ತಾಹ -೨೦೨೪ ನ್ನು ಉದ್ಘಾಟಿಲಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ೧ ಸಾವಿರದ ೩೩೦ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಈ ಸಮಾರಂಭದಲ್ಲಿ ಸುಮಾರು ೧೭ ದೇಶಗಳ ಇಂಧನ ಸಚಿವರು ಭಾಗವಹಿಸುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಗೋವಾದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ – ಎನ್ಐಟಿ ಯ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ. ಪಣಜಿ ಮತ್ತು ರಯಿಸ್ ಮಾರ್ಗೋಸ್ ನಡುವಿನ ಪ್ರವಾಸೋದ್ಯಮ ಚಟುವಟಿಕೆ ಉತ್ತೇಜಿಸಲು ರೋಪ್ವೇ ಉದ್ಘಾಟಿಸಲಿದ್ದಾರೆ.
ಇದೇ ವೇಳೆ ಅವರು, ಕೇಂದ್ರ ವಿವಿಧ ಇಲಾಖೆಗಳಲ್ಲಿ ನೌಕರಿ ಪಡೆದಿರುವ ೧ ಸಾವಿರದ ೯೩೦ ನವ ಉದ್ಯೋಗಿಗಳಿಗೆ ರೋಜ್ಗಾರ್ ಮೇಳದ ಅಡಿ ನೇಮಕಾತಿ ಆದೇಶ ಪತ್ರ ವಿತರಿಸಲಿದ್ದಾರೆ.
