ಬೆಂಗಳೂರು, 6 ಫೆಬ್ರವರಿ :
ಆ್ಯಂಕರ್ : ರೈತರ ಸಾಲ ಮನ್ನಾಕ್ಕಾಗಿ ಒತ್ತಾಯಿಸಿ ರೈತರು ರೈತ ಮಹಿಳೆಯರ ಬೃಹತ್ ಪ್ರತಿಭಟನೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದ ರೈತರ ತಂಡ ಬೆಂಗಳೂರು ಚಲೋ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಫ್ರೀಡಂ ಪಾರ್ಕ್ ಉದ್ಯಾನವನದಲ್ಲಿ ಜಮಾವಣಗೂಂಡು ಪ್ರತಿಭಟನೆ ಆರಂಭಿಸಿದರು.
ರೈತರ ಹೋರಾಟಕ್ಕೆ ಜಯವಾಗಲಿ, ಬೇಕೇ ಬೇಕು ನ್ಯಾಯ ಬೇಕು, ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದರು ಸಾವಿರಾರು ಸಂಖ್ಯೆಯ ರೈತರು ರೈತ ಮಹಿಳೆಯರು ಗ್ರೀನ್ ಬರ್ಡ್ಸ್ ಠೇವಣಿ ವಂಚಿತ ಮಹಿಳೆಯರು ಪ್ರತಿಭಟನೆಯಲ್ಲಿ ಇದ್ದರು.
ಪ್ರತಿಭಟನೆಯ ನೇತೃತ್ವ ವಹಿಸಿದ ರಾಜ್ಯ ರೈತ ಸಂಘಟನೆಗಳ ಓಕ್ಕೂಟ ಹಾಗು,ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರ್ ಶಾಂತಕುಮಾರ ಮಾತನಾಡಿ, ಹಳ್ಳಿಗಳಲ್ಲಿ ರೈತರು ಕೃಷಿ ತೂರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ,ಆತ್ಮಹತ್ಯೆಗಳ ಸರಣಿ ಹೆಚ್ಚುತ್ತಿದೆ, ಬರಗಾಲ ಕಾಡುತ್ತಿದೆ,ರೈತರ ಮಕ್ಕಳ ಮದುವೆಯಾಗಲು ಹೆಣ್ಣುಮಕ್ಕಳು ಒಪ್ಪುತ್ತಿಲ್ಲ, ಕೃಷಿ ದುರ್ಬಲವಾಗುತಿದೆ ಎಲ್ಲವನ್ನೂ ಪರಿಗಣಿಸಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಲೇಬೇಕು ಕಾಂಗ್ರೇಸ ಸರ್ಕಾರವೇ ತೆಲಂಗಾಣದಲ್ಲಿ ಮನ್ನ ಮಾಡಿಲ್ಲವೇ ಯಾಕೆ ಕರ್ನಾಟಕದಲ್ಲಿ ಮಾತನಾಡುತ್ತಿಲ್ಲ.
ಕೇಂದ್ರ ,ರಾಜ್ಯ, ಸರ್ಕಾರಗಳು ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಅನುದಾನ ಬಿಡುಗಡೆ ವಿಚಾರದಲ್ಲಿ ಕೆಸರೆರಾಚಾಟ ಆಡುತ್ತ,ರೈತರ ಬಗ್ಗೆ ಮೂಸಳೆ ಕಣ್ಣಿರು ಸುರಿಸುತಿವೆ, ಕಳೆದ ಹತ್ತು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ, ಖರ್ಚು ಮಾಡಿರುವ ಅನುದಾನ ಎಷ್ಟು ಎರಡು ಸರ್ಕಾರಗಳು ಶ್ವೇತಪತ್ರ ಬಿಡುಗಡೆ ಮಾಡಲಿ ಆಗ ರೈತರಿಗೆ ನಿಜ ಬಣ್ಣ ಬಯಲಾಗುತ್ತದೆ. ರೈತರಿಗೆ ಕನಿಕರ ಬೇಕಾಗಿಲ್ಲ ನೈಜ ಪರಿಹಾರ ಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಾಂಖಿಕ ಸಚಿವ ಡಿ ಸುಧಾಕರ್ ಆಗಮಿಸಿ ಪ್ರತಿಭಟನಾಕಾರರ ಒತ್ತಾಯ ಪತ್ರ ಸ್ವೀಕರಿಸಿ ಮಾತನಾಡಿ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ ನಾಳೆ ದೆಹಲಿಯಲ್ಲಿ ನಾಳೆ ಈ ಒತ್ತಾಯಗಳ ವಿಚಾರವನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು, ಸಮಯವಕಾಶ ಸಿಕ್ಕರೆ ಮುಖಂಡರನ್ನು ಆಹ್ವಾನಿಸಿ ಚರ್ಚಿಸಲಾಗುವುದು ಎಂದರು.
ಗ್ರೀನ್ ಬರ್ಡ್ಸ್ ಠೇವಣಿದಾರರ ಹಣ ಕೊಡಿಸಲು ಎರಡು ದಿನದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ ಹತ್ತಳ್ಳಿ ದೇವರಾಜ್, ಬರಡನ್ಪುರ ನಾಗರಾಜ್, ನಾಗರಾಜ್, ಜೀ ವಿ ಲಕ್ಷ್ಮೀದೇವಿ, ಕಿರಗಸೂರ ಶಂಕರ, ಗುರುಸಿದ್ದಪ್ಪ, ದೇವ ಕುಮಾರ್, ಪರಶುರಾಮ್, ರವಿಕುಮಾರ್, ಧರ್ಮರಾಜ್ ಸಾವು, ರಮೇಶ್ ಉಗಾರ್, ಧರ್ಮರಾಜ್, ರೇವಣ್ಣ, ಮುಂತಾದ ಸಾವಿರಾರು ಜನರು ಭಾಗವಹಿಸಿದರು.
