ಇಡುಕ್ಕಿ (ಕೇರಳ), ಫೆಬ್ರವರಿ :
ಆ್ಯಂಕರ್ : ಕೇರಳದಲ್ಲಿ ಮಾನವ-ಪ್ರಾಣಿ ಸಂಘರ್ಷ ಮುಂದುವರಿದಿದ್ದು, ಗುಡ್ಡಗಾಡು ಜಿಲ್ಲೆಯ ಮುನ್ನಾರ್ ಪ್ರವಾಸಿ ಪಟ್ಟಣ ಬಳಿ ಕನ್ನಿಮಲಾ ಎಸ್ಟೇಟ್ ನಲ್ಲಿ ಕಾಡು ಆನೆಯ ದಾಳಿಗೆ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದಾನೆ.
ಕಳೆದ ಮಧ್ಯರಾತ್ರಿ ಆಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕುರಿಸಿಕೊಂಡು ತೆರಳುತ್ತಿದ್ದ ಮೇಳೆ ಆನೆ ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಇಲ್ಲಿ ಆತ ಆಟೋರಿಕ್ಷಾ ಚಾಲಕ ಕೆಲಸ ಮಾಡುತ್ತಿದ್ದ. ಆನೆ ದಾಳಿ ವೇಳೆ ಆಟೋದಲ್ಲಿದ್ದ ಪ್ರಯಾಣಿಕರು ಆನೆ ಕಂಡ ತಕ್ಷಣ ವಾಹನದಿಂದ ಇಳಿದು ತಪ್ಪಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬೆಳಿಗ್ಗೆ ಮುನ್ನಾರ್ ಠಾಣೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
