ಅಹಮದಾಬಾದ್, :ಆ್ಯಂಕರ್ : ನಗರದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದಿಂದ ಬಂದಿರುವ ಹದಿನೆಂಟು ಹಿಂದೂ ನಿರಾಶ್ರಿತರಿಗೆ ಗುಜರಾತ್ ಗೃಹಖಾತೆ ರಾಜ್ಯ ಸಚಿವ ಹರ್ಷ ಸಂಘ್ವಿ ಅವರು ಪಾಲ್ಗೊಂಡಿದ್ದ ಶಿಬಿರದಲ್ಲಿ ಭಾರತೀಯ ಪೌರತ್ವವನ್ನು ನೀಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಈ 18 ಮಂದಿಗೆ ಸಂಘ್ವಿ ಅವರು ಭಾರತೀಯ ಪೌರತ್ವವನ್ನು ಪ್ರದಾನ ಮಾಡಿ ನವಭಾರತದ ಕನಸನ್ನು ಸಾಕಾರಗೊಳಿಸಲು ಒಗ್ಗೂಡಿ ಕೆಲಸ ಮಾಡುವಂತೆ ಹೇಳಿದರು.
2016 ಮತ್ತು 2018 ರ ರಾಜ್ಯ ಪತ್ರ(ಗೆಜೆಟ್) ಅಧಿಸೂಚನೆಗಳು ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಬಂದ ಅಲ್ಪಸಂಖ್ಯಾತ ಸಮುದಾಯಗಳ ಜನತೆಗೆ ಭಾರತೀಯ ಪೌರತ್ವ ನೀಡುವ ಅಧಿಕಾರವನ್ನು ಗುಜರಾತ್ನ ಅಹಮದಾಬಾದ್, ಗಾಂಧಿನಗರ ಮತ್ತು ಕಛ್ ನಗರಗಳ ಜಿಲ್ಲಾಧಿಕಾರಿಗಳಿಗೆ ಕೊಡಮಾಡಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
