ನವದೆಹಲಿ, :ಕಾಂಗ್ರೆಸ್ನಲ್ಲಿ ವಿಷ ತುಂಬಿದೆ ಇಂಡಿಯಾ ಮೈತ್ರಿಕೂಟ ರಾಮನ ಹೆಸರು ಕೇಳಿದರೆ ಸಾಕು ದ್ವೇಷ ಕಾರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟವು ರಾಮ ವಿರೋಧಿ ಮನಸ್ಥಿತಿಯನ್ನು ಹೊಂದಿದೆ, ಜಗತ್ತಿನಾದ್ಯಂತ ಲಕ್ಷಾಂತರ ಜನರು ಪೂಜಿಸುವ ಶಕ್ತಿಯನ್ನು ಅವಮಾನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಪಿಲಿಭಿತ್ನಲ್ಲಿ ಬಿಜೆಪಿ ಅಭ್ಯರ್ಥಿ ಜಿತಿನ್ ಪ್ರಸಾದ್ ಅವರ ಪರವಾಗಿ ಮೋದಿ ಮತಯಾಚನೆ ಮಾಡಿದರು. ಕಾಂಗ್ರೆಸ್ ರಾಮಮಂದಿರ ನಿರ್ಮಾಣವನ್ನು ತಡೆಯುವ ಪ್ರಯತ್ನ ಮಾಡಿದ್ದು ಮಾತ್ರವಲ್ಲದೆ ಮಹಾಮಸ್ತಕಾಭಿಷೇಕ ಸಮಾರಂಭದ ಆಹ್ವಾನವನ್ನು ಕೂಡ ತಿರಸ್ಕರಿಸಿತ್ತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ತನ್ನ ಸದಸ್ಯರೆಲ್ಲರನ್ನೂ ದೂರ ಇಟ್ಟಿದೆ. ಈ ದೇಶದ ಪರಂಪರೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಈ ದೇಶದಲ್ಲಿ ಪೂಜಿಸಲ್ಪಡುವ ಶಕ್ತಿಯನ್ನು ಕಾಂಗ್ರೆಸ್ ಅವಮಾನಿಸಿದೆ. ಕಾಂಗ್ರೆಸ್ನ ಪ್ರಣಾಳಿಕೆ ಮುಸ್ಲಿಮ್ ಲೀಗ್ನ ಪ್ರಣಾಳಿಕೆಯಂತೆ ಕಾಣುತ್ತದೆ.ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಸಮಾಜವಾದಿ ಪಕ್ಷವು ಕಾಂಗ್ರೆಸ್ನೊಂದಿಗೆ ನಿಂತಿದೆ ಆದರೆ 1984 ರಲ್ಲಿ ಸಿಖ್ಖರನ್ನು ಗುರಿಯಾಗಿಸಿದಾಗ ನಡೆದ ಗಲಭೆ ನಿಮಗೆ ನೆನಪಿದೆಯೇ? ಬಿಜೆಪಿ ಕರ್ತಾರ್ಪುರ ಕಾರಿಡಾರ್ ಅನ್ನು ತೆರೆದಿದೆ ಮತ್ತು ಯಾವಾಗಲೂ ಸಿಖ್ಖರ ಬೆಂಬಲಕ್ಕೆ ನಿಂತಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರಗಳು ಪ್ರಪಂಚದ ಸಹಾಯವನ್ನು ಕೇಳುತ್ತಿದ್ದವು, ಆದರೆ ಇಂದು ಭಾರತವು ಜಗತ್ತಿಗೆ ಸಹಾಯ ಮಾಡುತ್ತಿದೆ, ಭಾರತಕ್ಕೆ ಯಾವುದೂ ಅಸಾಧ್ಯವಲ್ಲ ಎಂದರು.
