ಅಕೋಲಾ, 23 ಏಪ್ರಿಲ್ಆ್ಯಂ ಕರ್:ಮಹಾರಾಷ್ಟ್ರದ ಅಕೋಲಾದಲ್ಲಿ ಬಿಜೆಪಿ ಅಭ್ಯರ್ಥಿ ಅನೂಪ್ ಧೋತ್ರೆ ಪರವಾಗಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಪ್ರಚಾರ ಸಭೆ ನಡೆಸಲಿದ್ದಾರೆ.
ಅನೂಪ್ ಧೋತ್ರೆ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಹಾಲಿ ಸಂಸದ ಸಂಜಯ್ ಧೋತ್ರೆ ಅವರ ಪುತ್ರರಾಗಿದ್ದಾರೆ. ಕಾಂಗ್ರೆಸ್ ನಿಂದ ಡಾ.ಅಭಯ್ ಪಾಟೀಲ್ ಕಣದಲ್ಲಿದ್ದಾರೆ.
ವಂಚಿತ್ ಬಹುಜನ್ ಅಘಾಡಿ ಮುಖ್ಯಸ್ಥರಾಗಿರುವ ಅಕೋಲಾದ ಮಾಜಿ ಸಂಸದ ಅಡ್ವಕೇಟ್ ಪ್ರಕಾಶ್ ಅಂಬೇಡ್ಕರ್ ಕೂಡ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಒಟ್ಟು ೧೭ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಕ್ಷೇತ್ರಕ್ಕೆ ಇದೇ ೨೬ ರಂದು ಮತದಾನ ನಡೆಯಲಿದೆ.
ಅಮರಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಅವರ ಪರವಾಗಿ ಅಮಿತ್ ಶಾ ನಾಳೆ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
