ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಜುಲೈ 12ರಿಂದ 14ರವರೆಗೆ ನಡೆಯಲಿದೆ. ಈ ಮೂರು ದಿನಗಳ ಮದುವೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ, ಕ್ರೀಡಾ ಲೋಕದ ದಿಗ್ಗಜರು, ಬಾಲಿವುಡ್ ಸೆಲೆಬ್ರಿಟಿಗಳು, ದೇಶದ ಪ್ರತಿಷ್ಠಿತ ಉದ್ಯಮಿಗಳು ಮತ್ತು ರಾಜಕಾರಣಿಗಳು ಸೇರಿ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ.
BulletsIn
- ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಮದುವೆ ನಡೆಯಲಿದೆ.
- ಮದುವೆ ಮೂರು ದಿನಗಳ ಕಾಲ ನಡೆಯಲಿದೆ.
- ಮೊದಲ ದಿನ ಜುಲೈ 12ರಂದು ಸಪ್ತಪದಿ ಕಾರ್ಯಕ್ರಮ ನಡೆಯಲಿದೆ.
- ಎಲ್ಲಾ ಅತಿಥಿಗಳು ಭಾರತೀಯ ಸಂಪ್ರಾದಕ ಉಡಿಗೆ ಹಾಕಿಕೊಂಡು ಬರಬೇಕು.
- ಎರಡನೇ ದಿನ ಜುಲೈ 13ರಂದು ‘ಶುಭ ಆಶೀರ್ವಾದ್’ ಕಾರ್ಯಕ್ರಮ ಇದೆ.
- ಈ ಕಾರ್ಯಕ್ರಮಕ್ಕೆ ಭಾರತೀಯ ಶೈಲಿಯ ಫಾರ್ಮಲ್ ಉಡುಪುಗಳನ್ನು ಧರಿಸಬೇಕಿದೆ.
- ಮೂರನೇ ದಿನ ಜುಲೈ 14ಕ್ಕೆ ‘ಮಂಗಳ ಉತ್ಸವ್’ ನಡೆಯಲಿದೆ.
- ಮಂಗಳ ಉತ್ಸವ್ ಆರತಕ್ಷತೆ ಕಾರ್ಯಕ್ರಮವಾಗಿದೆ.
- ಮದುವೆಗೆ ಕ್ರೀಡಾ ಲೋಕದ ದಿಗ್ಗಜರು, ಕ್ರಿಕೆಟರ್ಸ್ ಭಾಗಿಯಾಗಲಿದ್ದಾರೆ.
- ಬಾಲಿವುಡ್ ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ರಾಜಕಾರಣಿಗಳು ಕೂಡ ಭಾಗವಹಿಸಲಿದ್ದಾರೆ.
