ಶ್ರೀಹರಿಕೋಟಾ, 17 ಫೆಬ್ರವರಿ :
ಆ್ಯಂಕರ್:ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಂದು (ಫೆ.17) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ ಎಫ್ 14 (ಜಿಎಸ್ಎಲ್ವಿ-ಎಫ್14) ನಲ್ಲಿ ಇನ್ಸಾಟ್-3DS ಹವಾಮಾನ ಉಪಗ್ರಹವನ್ನು ಉಡಾವಣೆ ಮಾಡಿದೆ. ಈ ಇನ್ಸಾಟ್-3DSನ್ನು ದೇಶದಲ್ಲಿ ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಯ ನಿರ್ವಹಣೆ ಮಾಡುವ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. 6-ಚಾನೆಲ್ ಇಮೇಜರ್ ಮತ್ತು 19-ಚಾನೆಲ್ ಸೌಂಡರ್ ಸೇರಿದಂತೆ ಅತ್ಯಾಧುನಿಕ ಪೇಲೋಡ್ಗಳೊಂದಿಗೆ ಇದನ್ನು ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ NSAT-3DS ಉನ್ನತ ಮಟ್ಟದಲ್ಲಿ ಹವಾಮಾನ ದತ್ತಾಂಶ ಸಂಗ್ರಹ ಮಾಡುತ್ತದೆ ಎಂದು ಇಸ್ರೋ ಹೇಳಿದೆ.
