ಆತ್ಮೀಯ ನನ್ನ ರಾಷ್ಟ್ರಬಂಧುಗಳೇ.
ಕೋಟ್ಯ0ತರ ಭಾರತೀಯರ ಬಹುವರ್ಷಗಳ ನಿರೀಕ್ಷೆ ಹಾಗೂ ಭಾರತದ ಸಾರ್ವಭೌಮತ್ವದ ಸುರಕ್ಷತೆಗಾಗಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜಿಯವರ ನೇತೃತ್ವದ @BJP4India ಸರ್ಕಾರ ಕೈಗೊಂಡ ಆರ್ಟಿಕಲ್ 370 ರದ್ದತಿ ಹಾಗೂ ಕೇಂದ್ರಾಡಳಿತ ಪ್ರದೇಶ ಘೋಷಣೆಯ ನಿರ್ಧಾರವನ್ನು ಸಂವಿಧಾನಬದ್ಧ ಆದೇಶ ಎಂದು ಮಾನ್ಯ ಮಾಡುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನಿಕ ಪೀಠದ ನಿರ್ಧಾರ ಶತಕೋಟಿ ಭಾರತೀಯರಿಗೆ ಹರ್ಷ ಉಂಟುಮಾಡಿದೆ.
ಆರ್ಟಿಕಲ್ 370 ರದ್ದುಗೊಳಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ದೇಶದ ಸಾರ್ವಭೌಮತೆಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ, ಆರ್ಟಿಕಲ್ 370 ಯುದ್ಧದ ಸಮಯದಲ್ಲಿ ತೆಗೆದುಕೊಂಡ ತಾತ್ಕಾಲಿಕ ನಿರ್ಧಾರ ಎಂಬುದನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆರ್ಟಿಕಲ್ 370 ಇದ್ದಿದ್ದು ಏಕೀಕರಣಕ್ಕಾಗಿ, ವಿಘಟನೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದೆ.
ತಮ್ಮ ಜೀವನವನ್ನೇ ರಾಷ್ಟ್ರದ ಏಕತೆಗಾಗಿ ಸಮರ್ಪಿಸಿಕೊಂಡ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕನಸು ನನಸಾದ ಈ ಸಂದರ್ಭ ಅವರು ಹೇಳಿದ “ಒಂದು ದೇಶ, ಒಂದು ಸಂವಿಧಾನ ಒಂದು ಧ್ವಜ” ಅಖಂಡ ಭಾರತದ ಪರಿಕಲ್ಪನೆಯ ಮಾತುಗಳು ಇಂದು ಮತ್ತೆ ಮಾರ್ದನಿಸಿದೆ. ಅವರ ಮತ್ತು ವಿಚಾರ ಪರಿವಾರದ ಕೋಟ್ಯಾನುಕೋಟಿ ಕಾರ್ಯಕರ್ತರ ಕನಸು ನನಸಾದ ಸಂತಸ ಇಂದು ನಮ್ಮೆಲ್ಲರದ್ದಾಗಿದೆ.
ಆರ್ಟಿಕಲ್ 370 ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಾಗ ಅದನ್ನು ವಿರೋಧಿಸಿದ ಕಾಂಗ್ರೆಸ್ ಜಮ್ಮು ಕಾಶ್ಮೀರ ಆಂತರಿಕ ವಿಚಾರವಲ್ಲ, ಕಾಂಗ್ರೆಸ್ ಪಕ್ಷ ಪುನ್ಹ ಅಧಿಕಾರಕ್ಕೆ ಬಂದರೆ 370 ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಹೇಳಿತ್ತು. ಇಂದಿನ ಸುಪ್ರೀಂಕೋರ್ಟಿನ ತೀರ್ಪು ಕಾಂಗ್ರೆಸ್ಸಿನ ವಿಭಜನಾ ಮನಸ್ಥಿತಿಗೆ ತಣ್ಣೀರೆರಚಿದೆ ಮತ್ತು ದೇಶದ ಅಖಂಡತೆಗೆ ಘಾಸಿ ಉಂಟುಮಾಡುವುದನ್ನು ತಡೆದಿದೆ.
ಇದೊಂದು ಐತಿಹಾಸಿಕ ತೀರ್ಪು. ದೇಶದ ಸಮಗ್ರತೆಗೆ ಸಂದ ಜಯ. ಇದು ದೇಶದ ಜನತೆಯ ಪಾಲಿಗೆ ಮಾತ್ರವಲ್ಲ, ದಶಕಗಳ ಕಾಲ ಹಿಂಸೆ, ರಕ್ತಪಾತವನ್ನೇ ಕಂಡ ಕಾಶ್ಮೀರದ ಜನತೆಗೆ ಸಂದ ಜಯವಾಗಿದೆ. ಈ ತೀರ್ಪನ್ನು ಭಾರತೀಯರರಲ್ಲರೂ ತುಂಬು ಹೃದಯದಿಂದ ಸ್ವಾಗತಿಸೋಣ.
ನಿಮ್ಮ ಸಿ ಟಿ ರವಿ
