ನವದೆಹಲಿ, 23ಅಕ್ಟೋಬರ್ :
ಆ್ಯಂಕರ್ :ಪ್ರಧಾನಮಂತ್ರಿ ಅವರ, ಆಕಾಶವಾಣಿಯ ಮಾಸಿಕ ಕಾರ್ಯಕ್ರಮ ಮನದ ಮಾತು- ’ಮನ್ ಕಿ ಬಾತ್’ ಈ ತಿಂಗಳ ೨೯ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಪ್ರಸಾರವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ದೇಶ-ವಿದೇಶದ ಭಾರತೀಯರೊಂದಿಗೆ ತಮ್ಮ ಚಿಂತನೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಹಿಂದಿ ಭಾಷೆಯ ಪ್ರಸಾರದ ನಂತರ ಪ್ರಾದೇಶಿಕ ಭಾಷೆಯ ಅವತರಣಿಕೆ ಪ್ರಸಾರವಾಗಲಿದೆ. ಇದು ’ಮನ್ ಕಿ ಬಾತ್’ ೧೦೬ನೇ ಸಂಚಿಕೆಯಾಗಿದೆ.
