ನವದೆಹಲಿ, 25 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮಧ್ಯಪ್ರದೇಶದ ಇಂದೋರ್ನಲ್ಲಿ ಇಂದು ’ಮಜ್ದುರೊಂಕ ಹಿತ್ ಮಜ್ದುರೊಂಕೊ ಸಮರ್ಪಿತ್’ ಕಾರ್ಯಕ್ರಮ ನಿಮಿತ್ತ ಹುಕುಂಚಂದ್ ಮಿಲ್ನ ಕಾರ್ಮಿಕರನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಇಂದು ಇಂದೋರ್ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದ್ದು, ದೇಶದ ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ,ಈ ಸಂದರ್ಭದಲ್ಲಿ ೨೨೪ ಕೋಟಿ ರೂಪಾಯಿಗಳ ಚೆಕ್ಗಳನ್ನು ಕಾರ್ಮಿಕರಿಗೆ ಮೋದಿ ಅವರು ನೀಡಿದರು. ಬಹುದಿನಗಳಿಂದ ಬಾಕಿ ಉಳಿದಿರುವ ಹುಕ್ಕುಂಚಂದ್ ಮಿಲ್ ಕಾರ್ಮಿಕರ ಆಶೋತ್ತರವನ್ನು ಈ ಕಾರ್ಯಕ್ರಮ ನೆರವೇರಿಸಿದೆ. ೧೯೯೨ ರಲ್ಲಿ ಈ ಮಿಲ್ ಸ್ಥಗಿತಗೊಂಡಿದ್ದು, ಅಂದಿನಿಂದ ಕಾರ್ಮಿಕರು ತಮ್ಮ ಬಾಕಿ ಪಡೆದುಕೊಳ್ಳಲು ಸುದೀರ್ಘ ಹೋರಾಟ ನಡೆಸುತ್ತಿದ್ದರು.
ಹಿಂದೂಸ್ತಾನ್ ಸಮಾಚಾರ್
