
ನವದೆಹಲಿ, 24ಅಕ್ಟೋಬರ್ (ಹಿ.ಸ):
ಆ್ಯಂಕರ್ :ಸೌದಿ ಅರೇಬಿಯಾದ ರಿಯಾದ್ನಲ್ಲಿ ಇಂದಿನಿಂದ ನಡೆಯಲಿರುವ ಭವಿಷ್ಯದ ಹೂಡಿಕೆ ಉಪಕ್ರಮ – ಎಫ್ಐಐ ಸಮಾವೇಶದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾಗಿಯಾಗಲಿದ್ದಾರೆ.
ಎರಡು ದಿನಗಳ ಕಾರ್ಯಕ್ರಮದ ಅವಧಿಯಲ್ಲಿ ಸಚಿವರು ಸೌದಿ ಅರೇಬಿಯಾದ ಗಣ್ಯರನ್ನು ಭೇಟಿ ಮಾಡಲಿದ್ದು, ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಅಲ್-ಸೌದ್, ವಾಣಿಜ್ಯ ಸಚಿವ ಮಜಿದ್ ಬಿನ್ ಅಬ್ದುಲ್ಲಾ ಅಲ್ ಕಸ್ಸಾಬಿ, ಹೂಡಿಕೆ ಸಚಿವ ಖಾಲಿದ್ ಎ. ಅಲ್ ಫಾಲಿಹ್, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲ ಸಚಿವ ಬಂದರ್ ಬಿನ್ ಇಬ್ರಾಹಿಂ ಅಲ್ ಖೋರಾಯೆಫ್ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.
ಅಪಾಯದಿಂದ ಅವಕಾಶಕ್ಕೆ: ಹೊಸ ಕೈಗಾರಿಕಾ ನೀತಿ ಯುಗದಲ್ಲಿ ಉದಯೋನ್ಮುಖ ಆರ್ಥಿಕತೆಗಳಿಗೆ ತಂತ್ರಗಳು ಎಂಬ ವಿಷಯ ಕುರಿತು ನಡೆಯಲಿರುವ ಅಧಿವೇಶನದಲ್ಲಿ ಸೌದಿ ಅರೇಬಿಯಾದ ಹೂಡಿಕೆ ಸಚಿವರೊಂದಿಗೆ, ಗೋಯಲ್ ಅವರು ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.
ಸೌದಿ ಆರ್ಥಿಕತೆಯ ಮುಖ್ಯ ಭಾಗವಾಗಿರುವ ಭಾರತೀಯ ಸಮುದಾಯದೊಂದಿಗೆ ಸಚಿವರು ಸಂವಾದ ನಡೆಸಲಿದ್ದಾರೆ. ಇದೇ ಅವಧಿಯಲ್ಲಿ ವಿಶ್ವದ ಪ್ರಮುಖ ಉದ್ಯಮಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸಹ ಭೇಟಿ ಮಾಡುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್
