
ನವದೆಹಲಿ,21ನವೆಂಬರ್ (ಹಿ.ಸ):
ಆ್ಯಂಕರ್ :
ಸಂಸದೀಯ ವ್ಯವಹಾರಗಳ ಸಚಿವಾಲಯ ಸಂವಿಧಾನದ ದಿನ-ಸದ್ಬಾವನಾ ದಿವಸ್ ಅಂಗವಾಗಿ ಆಯೋಜಿಸಿರುವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದೆ.
ದೇಶದ ೨೨ ಭಾಷೆಗಳಲ್ಲಿ ಸಂವಿಧಾನದ ದಿವಸ್ ಅಂಗವಾಗಿ ಇದೇ ೨೬ ರಂದು ಸದ್ಬಾವನಾ ಕಾರ್ಯಕ್ರಮದ ಅಂಗವಾಗಿ ಸಂವಿಧಾನದ ಜಾಗೃತಿ ಕುರಿತು ರಸಪ್ರಶ್ನೆಗಳನ್ನು ಕಳುಹಿಸುವಂತೆ ಕೋರಲಾಗಿದೆ.
ಸಾರ್ವಜನಿಕರು ಅಂತರ್ಜಾಲದಲ್ಲಿ ತಮ್ಮ ಹೇಳಿಕೆಗಳನ್ನು ನಮೂದಿಸಬಹುದು. ಅಂತರ್ಜಾಲದ ವಿಳಾಸ ರೀಡ್ಪ್ರಿಯಾಂಬಲ್ ಡಾಟ್ ಎನ್ಐಸಿ ಡಾಟ್ ಇನ್ ಮತ್ತು ಕಾನ್ಸಿಟಿಟ್ಯೂಷನ್ಕ್ವಿಜ್ ಡಾಟ್ ಎನ್ಐಸಿ ಡಾಟ್ ಇನ್ಗೆ ಸಂಪರ್ಕಿಸಲು ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್
