ನವದೆಹಲಿ, 12 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಾಜಿ ಕೇಂದ್ರ ಗೃಹ ಸಚಿವ, ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಅವರ ನಿಧನಕ್ಕೆ ದೇಶದ ವಿಭಿನ್ನ ವಲಯಗಳಿಂದ ಸಂತಾಪಗಳ ಅಭಿವ್ಯಕ್ತಿ ವ್ಯಕ್ತವಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದುಃಖ ವ್ಯಕ್ತಪಡಿಸಿ, ಪಾಟೀಲ್ ಅವರ ನಿಧನದಿಂದ ನಾನು ಆಘಾತಗೊಂಡಿದ್ದೇನೆ. ಅವರು ಹಿರಿಯ ಸಹೋದ್ಯೋಗಿಯಾಗಿದ್ದು, ಅವರೊಂದಿಗೆ ನನಗೆ ಇದ್ದ ಆತ್ಮೀಯ ಬಾಂಧವ್ಯ ಹಾಗೂ ಅನೇಕ ಸ್ಮರಣೀಯ ಕ್ಷಣಗಳು ಎಂದಿಗೂ ಮರೆಯಲಾಗದು ಎಂದರು.
ಮಹಾನ್ ರಾಜನೀತಿಜ್ಞ ಆಗಿದ್ದ ಪಾಟೀಲ್, ರಾಷ್ಟ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದರು. ಪ್ರಮುಖ ಸಾಂವಿಧಾನಿಕ ಹಾಗೂ ಸಂಸದೀಯ ಜವಾಬ್ದಾರಿಗಳನ್ನು ಶ್ರೇಷ್ಠವಾಗಿ ನಿರ್ವಹಿಸಿ, ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಗಣನೀಯ ಕೊಡುಗೆ ನೀಡಿದ ವ್ಯಕ್ತಿ ಅವರು,” ಎಂದು ಶ್ಲಾಘಿಸಿದ್ದಾರೆ.
ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಅವರ ಸಮಗ್ರತೆ, ಹಿಡಿತ ಹಾಗೂ ಸಾರ್ವಜನಿಕ ಸೇವೆಯ ನಿಷ್ಠೆಯನ್ನು ಮೆಚ್ಚಿದ ಪ್ರತಿಯೊಬ್ಬರಿಗೂ ಅಪಾರ ನಷ್ಟ,” ಎಂದು ಖರ್ಗೆ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
