ನವದೆಹಲಿ, 20 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೀರ ಭೂಮಿಯಲ್ಲಿರುವ ರಾಜೀವ ಸಮಾಧಿಗೆ ತೆರಳಿ ನಮನಗಳನ್ನು ಸಲ್ಲಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ರಾಜೀವ್ ಗಾಂಧಿಯವರ ಪರಿವರ್ತನಾತ್ಮಕ ನಾಯಕತ್ವವನ್ನು ಸ್ಮರಿಸಿದ್ದಾರೆ, ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸುವುದು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು, ಟೆಲಿಕಾಂ ಮತ್ತು ಐಟಿ ಕ್ರಾಂತಿ, ಗಣಕೀಕರಣ ಕಾರ್ಯಕ್ರಮಗಳು, ಶಾಂತಿ ಒಪ್ಪಂದಗಳ ಮುಂದುವರಿಕೆ, ಮಹಿಳಾ ಸಬಲೀಕರಣ, ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮ ಹಾಗೂ ಸಮಗ್ರ ಶಿಕ್ಷಣಕ್ಕೆ ಒತ್ತು ನೀಡುವ ಹೊಸ ಶಿಕ್ಷಣ ನೀತಿ ಇವೆಲ್ಲಾ ಅವರ ಅಭೂತಪೂರ್ವ ಉಪಕ್ರಮಗಳಾಗಿವೆ. ಇವುಗಳು ಭಾರತದ ಭವಿಷ್ಯವನ್ನು ಬದಲಾಯಿಸಿದವು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
