ದೆಹಲಿ, 23 ಡಿಸೆಂಬರ್(ಹಿ.ಸ):
ಆ್ಯಂಕರ್ :
ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಡಿ ಒಂದು ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್ಗಳು ವಿತರಣೆಯಾಗಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಅವರು, ಈ ಮೈಲಿಗಲ್ಲು ಸ್ಥಾಪನೆಯಾಗಿರುವ ಸುದ್ದಿ ಬಹಳ ರೋಚಕವಾಗಿದೆ. ಈ ರೀತಿಯ ಯೋಜನೆಗಳ ಪ್ರಯೋಜನಗಳನ್ನು ದೇಶಾದ್ಯಂತ ಬಡವರಿಗೆ ತಲುಪಿಸುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
