
ನವದೆಹಲಿ, 17ಅಕ್ಟೋಬರ್ (ಹಿ.ಸ):
ಆ್ಯಂಕರ್ :
ದುರ್ಗಾ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ಭಾರತ-ಬಾಂಗ್ಲಾ ಗಡಿಯಲ್ಲಿರುವ ಲಾಲ್ ಮೊನಾರಿ ಹಾತ್ ಜಿಲ್ಲೆಯ ಬುರಿಮಾರಿ ಬಂದರಿನ ಮೂಲಕ ವ್ಯಾಪಾರವನ್ನು ಇದೇ ೨೧ ರಿಂದ ೮ ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಭಾರತದೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ಬಂದರಿನ ಮೂಲಕ ರಫ್ತು ಮತ್ತು ಆಮದು ವಹಿವಾಟುಗಳನ್ನು ೮ ದಿನಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಬುರಿಮಾರಿ ಸೀಮಾ ವ್ಯಾಪಾರ ಒಕ್ಕೂಟದ ಅಧ್ಯಕ್ಷ ಸೈಯದ್ ಉಸ್ಮಾನ್ ಸಯೇದ್ ತಿಳಿಸಿದ್ದಾರೆ.
ಸರಕು ವ್ಯಾಪಾರ ಮಾತ್ರ ಸ್ಥಗಿತಗೊಳ್ಳಲಿದ್ದು, ಅಧಿಕೃತ ಪಾಸ್ಪೋರ್ಟ್ ಹೊಂದಿರುವ ಪ್ರಯಾಣಿಕರ ಓಡಾಟ ಎಂದಿನಂತೆ ಚೆಕ್ಪೋಸ್ಟ್ನಲ್ಲಿ ಮುಂದುವರೆಯಲಿದೆ ಎಂದು ಬುರಿಮಾರಿ ಪೊಲೀಸ್ ಅಧಿಕಾರಿ ಮೂರ್ ಹಸನ್ ಕಬೀರ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
