• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಭಾರತೀಯ ಸಂಸ್ಕೃತಿ ಹಾಗೂ ಮಾತೃಭೂಮಿಯಲ್ಲಿ ನಂಬಿಕೆ ಇಡುವವನೇ ಹಿಂದೂ : ಡಾ. ಮೋಹನ್ ಭಾಗವತ್
National

ಭಾರತೀಯ ಸಂಸ್ಕೃತಿ ಹಾಗೂ ಮಾತೃಭೂಮಿಯಲ್ಲಿ ನಂಬಿಕೆ ಇಡುವವನೇ ಹಿಂದೂ : ಡಾ. ಮೋಹನ್ ಭಾಗವತ್

CliQ INDIA
Last updated: December 21, 2025 11:20 pm
CliQ INDIA
Share
3 Min Read
SHARE

ಕೋಲ್ಕತ್ತಾ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಸಂಸ್ಕೃತಿ ಮತ್ತು ಮಾತೃಭೂಮಿಯನ್ನು ಗೌರವಿಸುವವನು ಹಿಂದೂ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.

ಕೋಲ್ಕತ್ತಾದಲ್ಲಿ ನಡೆದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ ಸ್ಥಾಪನೆ, ಉದ್ದೇಶಗಳು ಹಾಗೂ ಕಾರ್ಯವಿಧಾನದ ಬಗ್ಗೆ ವಿವರಿಸಿದರು. ಸಂಘದ ಕುರಿತು ಸಮಾಜದಲ್ಲಿ ಹರಡುವ ಅನೇಕ ಅಭಿಪ್ರಾಯಗಳು ಮೂರನೇ ವ್ಯಕ್ತಿಗಳಿಂದ ಉಂಟಾಗಿರುವ ಸುಳ್ಳು ನಿರೂಪಣೆಗಳ ಮೇಲೆ ಆಧಾರಿತವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ವದಂತಿಗಳಲ್ಲ, ಸತ್ಯಾಧಾರಿತ ತಿಳುವಳಿಕೆ ಜನರಲ್ಲಿ ಮೂಡಿಸಬೇಕೆಂಬುದು ಸಂಘದ ಆಶಯವಾಗಿದೆ ಎಂದರು.

ಆರ್‌ಎಸ್‌ಎಸ್ ಯಾವುದೇ ರಾಜಕೀಯ ಉದ್ದೇಶದಿಂದಲೂ ಅಥವಾ ಪ್ರತಿಕ್ರಿಯೆಯ ಫಲವಾಗಿ ಸ್ಥಾಪನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಡಾ. ಭಾಗವತ್, ಭಾರತದ ವೈಭವವನ್ನು ಜಗತ್ತಿಗೆ ಪರಿಚಯಿಸಿ, ಭಾರತೀಯ ಸಮಾಜವನ್ನು ವಿಶ್ವ ನಾಯಕತ್ವದ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಸಂಘ ಸ್ಥಾಪನೆಯಾಯಿತು ಎಂದು ಹೇಳಿದರು.

ಸಂಘವು ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯಕ್ಕೆ ಕೈಹಾಕಿದೆ. ಇದು ಯಾವುದೇ ಸಮುದಾಯದ ವಿರುದ್ಧವಲ್ಲ. “ಜಗತ್ತಿನಲ್ಲಿ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಯಾರೂ ಇರದಿದ್ದರೂ ಸಹ ಹಿಂದೂ ಸಮಾಜವನ್ನು ಸಂಘಟಿಸುವ ಅಗತ್ಯವಿದೆ, ಏಕೆಂದರೆ ಸಮಾಜ ಒಳಗಿನಿಂದಲೇ ವಿಭಜನೆಯಾಗಿದೆ” ಎಂಬ ಶ್ರೀ ಗುರೂಜಿಯವರ ಹೇಳಿಕೆಯನ್ನು ಅವರು ಉಲ್ಲೇಖಿಸಿದರು.

1857ರ ಕ್ರಾಂತಿಯ ವೈಫಲ್ಯದ ನಂತರ, ಅಲ್ಪಸಂಖ್ಯೆಯ ಬ್ರಿಟಿಷರು ಭಾರತವನ್ನು ಹೇಗೆ ಆಳಲು ಸಾಧ್ಯವಾಯಿತು ಎಂಬ ಪ್ರಶ್ನೆ ಉದ್ಭವಿಸಿತು ಎಂದು ಅವರು ಹೇಳಿದರು. ಆ ಸಂದರ್ಭದಲ್ಲಿ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಸುಧಾರಣೆಯ ಅಗತ್ಯವೂ ಸ್ಪಷ್ಟವಾಯಿತು. ಸ್ವಯಂ-ಮರೆತುಹೋಗುವಿಕೆ, ಕುರುಡು ಸಂಪ್ರದಾಯಗಳು ಹಾಗೂ ದುಷ್ಟ ಆಚರಣೆಗಳು ನಮ್ಮ ದೌರ್ಬಲ್ಯವಾಗಿದ್ದವು ಎಂದು ಅವರು ವಿಶ್ಲೇಷಿಸಿದರು.

ಸ್ವಾಮಿ ವಿವೇಕಾನಂದ ಹಾಗೂ ಮಹರ್ಷಿ ದಯಾನಂದ ಸರಸ್ವತಿ ಅವರು ಭಾರತೀಯ ಸಮಾಜಕ್ಕೆ ಅದರ ಗುರುತನ್ನು ಮರಳಿ ನೆನಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದು ಹೇಳಿದ ಡಾ. ಭಾಗವತ್, ಇದೇ ಹಿನ್ನೆಲೆಯಲ್ಲೇ ರಾಷ್ಟ್ರಭಕ್ತ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ವ್ಯಕ್ತಿತ್ವ ರೂಪುಗೊಂಡಿತು ಎಂದರು.

ಡಾ. ಹೆಡ್ಗೆವಾರ್ 11ನೇ ವಯಸ್ಸಿನಲ್ಲಿ ಪ್ಲೇಗ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲೇ ತಮ್ಮ ಪೋಷಕರನ್ನು ಕಳೆದುಕೊಂಡರು. ನಂತರದ ದಿನಗಳಲ್ಲಿ ತೀವ್ರ ಬಡತನವನ್ನು ಎದುರಿಸಿದರೂ, ಅಧ್ಯಯನದಲ್ಲಿ ಸದಾ ಶ್ರೇಷ್ಠರಾಗಿದ್ದರು ಎಂದು ಅವರು ಸ್ಮರಿಸಿದರು. ಕಾಳಿ ದೇವಿಗೆ ಸಲ್ಲಿಸಿದ ಪ್ರತಿಜ್ಞೆಯಂತೆ, ತಮ್ಮ ಜೀವನವನ್ನು ಭಾರತ ಮಾತೆಯ ಸೇವೆಗೆ ಸಮರ್ಪಿಸಿದರು. ಹತ್ತು ವರ್ಷಗಳ ಆಳವಾದ ಚಿಂತನೆಯ ನಂತರ, 1925ರ ವಿಜಯದಶಮಿಯಂದು ಆರ್‌ಎಸ್‌ಎಸ್ ಸ್ಥಾಪನೆಯಾಯಿತು. ಸಮಾಜದ ದೌರ್ಬಲ್ಯ ಹಾಗೂ ದೇಶದ ದುಸ್ಥಿತಿಯಿಂದ ಜನಿಸಿದ ಸಂಘದ ಗುರಿ ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸುವುದಾಗಿತ್ತು.

ವೈಯಕ್ತಿಕ ಅಭಿವೃದ್ಧಿಯ ಮೂಲಕ ಸಾಮಾಜಿಕ ಪರಿವರ್ತನೆ

ವೈಯಕ್ತಿಕ ವಿಕಾಸದ ಮೂಲಕ ಸಮಾಜದಲ್ಲಿ ಬದಲಾವಣೆ ತರುವುದೇ ಸಂಘದ ಕಾರ್ಯವಿಧಾನ ಎಂದು ಸರಸಂಘಚಾಲಕ್ ಹೇಳಿದರು. ಸಂಘದ ಶಾಖೆ ಎಂದರೆ ದಿನಕ್ಕೆ ಒಂದು ಗಂಟೆ ದೇಶ ಮತ್ತು ಸಮಾಜದ ಕುರಿತು ಚಿಂತನೆಗೆ ಮೀಸಲಿಡುವ ಪ್ರಕ್ರಿಯೆಯಾಗಿದೆ ಎಂದು ವಿವರಿಸಿದರು.

ಹಿಂದೂ ಧರ್ಮವು ಕೇವಲ ಪೂಜಾ ವಿಧಾನ, ಆಹಾರ ಅಥವಾ ವೇಷಭೂಷಣವಲ್ಲ. ಅದು ಒಂದು ಪಂಥವಲ್ಲ, ಬದಲಾಗಿ ಒಂದು ಸ್ವಭಾವ ಎಂದು ಅವರು ಸ್ಪಷ್ಟಪಡಿಸಿದರು. ಈ ನೆಲದ ಸಂಸ್ಕೃತಿ ಹಾಗೂ ಮಾತೃಭೂಮಿಯನ್ನು ಗೌರವಿಸುವ ಪ್ರತಿಯೊಬ್ಬರೂ ಹಿಂದೂಗಳೇ. ವೈವಿಧ್ಯತೆಯೊಳಗಿನ ಏಕತೆಯೇ ಹಿಂದೂ ಸ್ವಭಾವದ ಮೂಲ ಲಕ್ಷಣವಾಗಿದೆ ಎಂದರು.

“ವಸುಧೈವ ಕುಟುಂಬಕಂ” ಎಂಬ ತತ್ವದೊಂದಿಗೆ ಹಿಂದೂ ಸಮಾಜವು ಎಲ್ಲರ ಕಲ್ಯಾಣವನ್ನು ಬಯಸುತ್ತದೆ. ಸಂಘದ ಗುರಿ ಸಮಾಜವನ್ನು ಒಗ್ಗೂಡಿಸುವುದೇ ಹೊರತು, ಅದರೊಳಗೆ ಪ್ರತ್ಯೇಕ ಶಕ್ತಿಕೇಂದ್ರ ನಿರ್ಮಿಸುವುದಲ್ಲ ಎಂದು ಅವರು ಹೇಳಿದರು.

ಸಂಘದಿಂದ ತರಬೇತಿ ಪಡೆದ ಸ್ವಯಂಸೇವಕರು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸತ್ಕಾರ್ಯಗಳಿಗೆ ಸಂಘ ಸದಾ ಬೆಂಬಲ ನೀಡುತ್ತಿದ್ದು, ಸಮಾಜದ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಡಾ. ಭಾಗವತ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಅಮಿತ್ ಶಾ ಒಡಿಶಾ ಭೇಟಿ: ವಿಧಿವಿಜ್ಞಾನ ಮೂಲಸೌಕರ್ಯ, ಭದ್ರತೆಗೆ ಉತ್ತೇಜನ; NFSU ಕ್ಯಾಂಪಸ್ ಅಡಿಪಾಯ, CISF ಸ್ಥಾಪನಾ ದಿನ ಕಾರ್ಯಕ್ರಮಗಳು
ಬಿಹಾರ ವಿಧಾನ ಸಭಾ ಚುನಾವಣೆ : 143 ಆರ್‌ಜೆಡಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪ್ರಧಾನಿ ಇಂದಿನಿಂದ ಆಂಧ್ರಪ್ರದೇಶ ,ಕೇರಳ ರಾಜ್ಯಗಳಿಗೆ ಎರಡು ದಿನಗಳ ಭೇಟಿ
ಸ್ಫೋಟಕ ಸರಬರಾಜು ಪ್ರಕರಣ:ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಎನ್‌ಐಎ ವಿಶೇಷ ನ್ಯಾಯಾಲಯ | BulletsIn
ರಾಹುಲ್ ಗಾಂಧಿ ಪೌರತ್ವ ಪ್ರಕರಣ: ಕೇಂದ್ರದಿಂದ ದಾಖಲೆ ಕೇಳಿದ ಅಲಹಾಬಾದ್ ಹೈಕೋರ್ಟ್ ರಾಹುಲ್ ಗಾಂಧಿ ಪೌರತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರದಿಂದ ದಾಖಲೆಗಳನ್ನು ಕೇಳಿದೆ. ಎಫ್‌ಐಆರ್ ಕುರಿತ ನಿರ್ಧಾರವನ್ನು ಮಾರ್ಚ್ 19 ರಂದು ಪರಿಗಣಿಸಲಾಗುವುದು.

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಪೋಲಿಯೋ ಲಸಿಕೆ ಹಾಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ
Next Article ನಾಳೆ ಜಿಲ್ಲಾ ಮಟ್ಟದ ಕೆಡಿಪಿ ಸಭೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?