ಕೇದಾರನಾಥ, 4 ನವೆಂಬರ್ (ಹಿ.ಸ):
ಆ್ಯಂಕರ್ :
: ಕರ್ನಾಟಕ, ಮಹಾರಾಷ್ಟ್ರ ನಡುವಣ ಗಡಿ ವಿವಾದದ ಬಿಸಿ ಉತ್ತರಾಖಂಡ ಪ್ರವಾಸಕ್ಕೆ ತೆರಳಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಅವರ ಕುಟುಂಬದವರಿಗೂ ತಟ್ಟಿದೆ. ಉದ್ಧವ್ ಠಾಕ್ರೆ ಶುಕ್ರವಾರ ಬದರಿನಾಥಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬೆಳಗಾವಿಯ ಗಡಿ ಭಾಗದ ಜನರು ಅವರ ಎದುರು ಘೋಷಣೆಗಳನ್ನು ಕೂಗಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿಗಳೊಂದಿಗೆ ಮಹಾರಾಷ್ಟ್ರವನ್ನು ಒಗ್ಗೂಡಿಸಬೇಕು ಎಂದು ಕರ್ನಾಟಕ ಗಡಿ ನಿವಾಸಿಗಳು ಘೋಷಣೆ ಕೂಗಿದ್ದಾರೆ.
ಉದ್ಧವ್ ಸಾಹೇಬ್, ಆದಿತ್ಯ ಸಾಹೇಬ್ ನೀವು ಯಾವುದಕ್ಕೂ ಚಿಂತಿಸಬೇಡಿ. ನಾವು ನಿಮ್ಮೊಂದಿಗಿದ್ದೇವೆ ಎಂದು ಗಡಿ ಭಾಗದ ನಿವಾಸಿಗಳು ಠಾಕ್ರೆಗೆ ಬೆಂಬಲ ನೀಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಾಮಸ್ಮರಣೆ ಮಾಡಿದ್ದಾರೆ. ಉದ್ಧವ್ ಠಾಕ್ರೆ ಕುಟುಂಬ ಶನಿವಾರ ಬೆಳಗ್ಗೆ ಕೇದಾರನಾಥ ತಲುಪಿದೆ.
ಉದ್ಧವ್ ಠಾಕ್ರೆ ಅವರನ್ನು ಉತ್ತರಾಖಂಡಕ್ಕೆ ಸ್ವಾಗತಿಸಲು ಗಡಿ ಭಾಗದ ಜನರು ಗುರುವಾರ ಬದರಿನಾಥಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉದ್ಧವ್ ಠಾಕ್ರೆ, ರಶ್ಮಿ ಠಾಕ್ರೆ, ತೇಜಸ್ ಠಾಕ್ರೆ ಮತ್ತು ಶಿವಸೇನಾ ಕಾರ್ಯದರ್ಶಿ ಮಿಲಿಂದ್ ನಾರ್ವೇಕರ್ ಉಪಸ್ಥಿತರಿದ್ದರು. ಈ ಗಡಿ ಭಾಗದ ನಾಗರಿಕರು ಬೆಳಗಾವಿ, ಕಾರವಾರ, ನಿಪ್ಪಾಣಿಗಳೊಂದಿಗೆ ಅಖಂಡ ಮಹಾರಾಷ್ಟ್ರವಾಗಬೇಕು ಮತ್ತು ‘ಜಾಯೇಂಗೆ ಮಹಾರಾಷ್ಟ್ರ ಮೇ ನಹೀ ತೋ ಜೈಲ್ ಮೇ’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಉದ್ಧವ್ ಠಾಕ್ರೆ ಕೂಡ ಘೋಷಣೆಗಳಿಗೆ ದನಿಗೂಡಿಸಿದರು.
ಹಿಂದೂಸ್ತಾನ್ ಸಮಾಚಾರ್
