
ನವದೆಹಲಿ, 27 ನವೆಂಬರ್ (ಹಿ.ಸ):
ಆ್ಯಂಕರ್ :
ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ತಿಂಗಳ ೩೦ ರಿಂದ ದುಬೈ, ಯುಎಇಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಶೃಂಗಸಭೆಯು, ಹವಾಮಾನ ಬದಲಾವಣೆ ಕುರಿತ ಯುನೈಟೆಡ್ ನೇಷನ್ಸ್ ಫ್ರೇಮ್ ವರ್ಕ್ ಕನ್ವೆನ್ಷನ್ ಗೆ ಕಾಪ್-೨೮ ರ ಉನ್ನತ ಮಟ್ಟದ ಒಂದು ಭಾಗವಾಗಿದೆ. ಕಾಪ್-೨೮ ಯುಎಇ ಅಧ್ಯಕ್ಷತೆಯ ಅಡಿಯಲ್ಲಿ ಇದೇ ೨೮ ರಿಂದ ಡಿಸೆಂಬರ್ ೧೨ ರವರೆಗೆ ನಡೆಯಲಿದೆ. ಯುಎನ್ಎಫ್ಸಿಸಿಸಿಗೆ ಪಕ್ಷಗಳ ಸಮಾವೇಶವು ಹವಾಮಾನ ಬದಲಾವಣೆಯ ಹಂಚಿಕೆಯ ಸವಾಲನ್ನು ಎದುರಿಸಲು ಸಾಮೂಹಿಕ ಕ್ರಿಯೆಗೆ ವೇಗವನ್ನು ನೀಡಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಗ್ಲಾಸ್ಗೋದಲ್ಲಿ ಕಾಪ್-೨೬ ಸಮಯದಲ್ಲಿ, ಹವಾಮಾನ ಕ್ರಿಯೆಗೆ ಭಾರತದ ಅಭೂತಪೂರ್ವ ಕೊಡುಗೆಯಾಗಿ ಪಂಚಾಮೃತ ಎಂಬ ಶೀರ್ಷಿಕೆಯ ಐದು ನಿರ್ದಿಷ್ಟ ಗುರಿಗಳನ್ನು ಪ್ರಧಾನಿ ಘೋಷಿಸಿದ್ದರು. ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪರಿಸರಕ್ಕಾಗಿ ಮಿಷನ್ ಲೈಫ್ಸ್ಟೈಲ್ ಘೋಷಿಸಿದ್ದರು. ಭಾರತದ ಜಿ-೨೦ ಅಧ್ಯಕ್ಷತೆಯ ಆದ್ಯತೆಯ ಅಂಶ ಹವಾಮಾನ ಬದಲಾವಣೆ ಕುರಿತಾಗಿತ್ತು ಮತ್ತು ಹೊಸ ದೆಹಲಿ ನಾಯಕರ ಘೋಷಣೆ ಮತ್ತು ಭಾರತದ ಅಧ್ಯಕ್ಷೀಯ ಅವಧಿಯಲ್ಲಿನ ಇತರ ಫಲಿತಾಂಶಗಳಲ್ಲಿ ಗಮನಾರ್ಹ ಹೊಸ ಕ್ರಮಗಳನ್ನು ಕಂಡುಹಿಡಿಯಲಾಗಿದೆ. ಈ ಯಶಸ್ಸನ್ನು ಮುಂದುವರಿಸಲು ಕಾಪ್-೨೮ ಅವಕಾಶ ಒದಗಿಸುತ್ತದೆ. ತಮ್ಮ ಭೇಟಿಯ ಸಮಯದಲ್ಲಿ, ಶೃಂಗಸಭೆಯಲ್ಲಿ ಭಾಗವಹಿಸುವ ಹಲವು ನಾಯಕರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
