ಅಗಟ್ಟಿ, 3 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ಮಧ್ಯಾಹ್ನ ಲಕ್ಷದ್ವೀಪದ ಅಗಟ್ಟಿ ದ್ವೀಪದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಕರ್ಯವನ್ನು ವಿತರಣೆ ಮಾಡಿ, ಮಾತನಾಡಲಿದ್ದಾರೆ. ಕರವಟ್ಟಿಯಲ್ಲಿಯೂ ಸಹ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ೧ ಸಾವಿರದ ೧೫೦ ಕೋಟಿ ರೂಪಾಯಿ ವೆಚ್ಚದ ದೂರಸಂಪರ್ಕ, ಕುಡಿಯುವ ನೀರು, ಸೌರವಿದ್ಯುತ್ ಹಾಗೂ ಆರೋಗ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದಲ್ಲಿ ಚಾಲನೆ ನೀಡಿ ನಂತರ ಕೇರಳ ರಾಜ್ಯದ ಕೊಚ್ಚಿಯಲ್ಲಿ ಆಯೋಜಿಸಲಾಗಿರುವ ಸ್ತ್ರಿಶಕ್ತಿ ಸಂಗಮಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸತ್ತಿನಲ್ಲಿ ಇತ್ತಿಚಿಗೆ ಮಹಿಳಾ ಮೀಸಲಾತಿ ಅಂಗೀಕಾರವಾದ ಬಳಿಕ ಕೇರಳ ಬಿಜೆಪಿ ಮಹಿಳಾ ಘಟಕ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
